ಕುಷ್ಟಗಿ: ತಾಲೂಕಿನ ಸಂಗನಾಳ ಗ್ರಾಮದಿಂದ ಹುಲಿಗೆಯ ಶ್ರೀ ಹುಲಿಗೆಮ್ಮ ಜಾತ್ರೆಗೆಂದು ಹೊರಟಿದ್ದ ವೇಳೆ ಟಂ ಟಂ ವಾಹನ ಸೇತುವೆ ಪಕ್ಕದ ಕಲ್ಲಿಗೆ ಢಿಕ್ಕಿಯಾದ ಪರಿಣಾಮ, ವಾಹನದಲ್ಲಿದ್ದ ಮಕ್ಕಳು ಸೇರಿದಂತೆ 18 ಭಕ್ತಾಧಿಗಳು, ಗಾಯಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೇ ರಂದು 26 ರಂದು ಈ ಅವಘಡ ನಡೆದಿದ್ದು, ಗಂಭೀರ ಗಾಯಗೊಂಡ ಮೂವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಉಳಿದ ಗಾಯಾಳುಗಳನ್ನು ಗಂಗಾವತಿ, ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ:ಅಂಬೇಡ್ಕರ್ ಅವರ ಕಿವಿಮಾತನ್ನು ನೆಹರು ಕೇಳಲಿಲ್ಲ : ಬಸನಗೌಡ ಪಾಟೀಲ್ ಯತ್ನಾಳ
ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಾದವರನ್ನು ಶನಿವಾರ ಶಾಸಕ ಅಮರೇಗೌಡ ಪಾಟೀಲ ಭೇಟಿ ಮಾಡಿ ಆರೋಗ್ಯ ವಿಚಾರಿಸಿ, ಸೂಕ್ತ ಚಿಕಿತ್ಸೆ ನೀಡುವಂತೆ ಅಲ್ಲಿನ ವೈದ್ಯರಿಗೆ ಸೂಚಿಸಿದ್ದಾರೆ.