ಬಳ್ಳಾರಿ: ಲಾರಿ ಮತ್ತು ಕ್ರೂಸರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕರ್ನಾಟಕ-ಆಂಧ್ರ ಮೂಲದ 7 ಜನ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ತಡಪತ್ರಿ ಬಳಿ ನಡೆದಿದೆ.
ವಿಚಿತ್ರವೆಂದರೆ ವಿಷಯ ತಿಳಿದು ಘಟನಾ ಸ್ಥಳಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳಿದ ಮೃತರ ಸಂಬಂಧಿ ಭಾಸ್ಕರ್ ರೆಡ್ಡಿ ಸಹ ಬಳ್ಳಾರಿಯಲ್ಲಿ ರಸ್ತೆ ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿದ್ದಾರೆ.
ಮೃತರನ್ನು ಸಮೀಪದ ಅನಂತಪುರದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಂಪ್ಲಿ ಪಟ್ಟಣದ ಗುತ್ತಿಗೆದಾರ ಭಾಸ್ಕರ ರೆಡ್ಡಿ ಪತ್ನಿ ಸೇರಿದಂತೆ ಸಂಬಂಧಿಕರು ಅಪಘಾತದಲ್ಲಿ ಸಾವಿಗಿಡಾಗಿದ್ದು, ಅವರನ್ನು ನೋಡಲು ಭಾಸ್ಕರ ರೆಡ್ಡಿ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಇದೀಗ ಅವರು ಅನಂತಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಂಪ್ಲಿಯಿಂದ ಭಾಸ್ಕರರೆಡ್ಡಿ ಸ್ನೇಹಿತರು ಪುರಸಭೆ ಸದಸ್ಯರು ಅಪಘಾತದ ಸ್ಥಳಕ್ಕೆ ತೆರಳಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.