ಜೈಪುರ: ಕಾರು – ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ಫತೇಪುರ್-ಸಲಾಸರ್ ರಸ್ತೆಯಲ್ಲಿ ಭಾನುವಾರ ರಾತ್ರಿ (ಜ.22 ರಂದು) ನಡೆದಿದೆ.
Advertisement
ಕಾರು – ಟ್ರಕ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತಪಟ್ಟವರು ಹರಿಯಾಣ ಮೂಲದ ನಿವಾಸಿಗಳೆಂದು ಎಂದು ತಿಳಿದು ಬಂದಿದೆ.
ಘಟನೆಯ ಬಗ್ಗೆ ಡೆಪ್ಯುಟಿ ಎಸ್ಪಿ ರಾಜೇಶ್ ಕುಮಾರ್ ಮಾಹಿತಿ ನೀಡಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ಇದನ್ನೂ ಓದಿ: ಕಾರಿಗೆ ಢಿಕ್ಕಿ ಹೊಡೆದು ಪಾದಚಾರಿಗಳ ಮೇಲೆ ಹರಿದ ಟ್ರಕ್: 6 ಮಂದಿ ದಾರುಣ ಅಂತ್ಯ