Advertisement

ಕೇಂದ್ರ ಸರ್ಕಾರದ ವಿರುದ್ಧ ಆರ್‌ಕೆಎಸ್‌ನಿಂದ ಪ್ರತಿಭಟನೆ

08:16 AM Oct 23, 2019 | Team Udayavani |

ಧಾರವಾಡ: ಕೇಂದ್ರ ಸರಕಾರವು ಆರ್‌ ಸಿಇಪಿ ಒಪ್ಪಂದಕ್ಕೆ ಸಹಿ ಹಾಕದಂತೆ ಆಗ್ರಹಿಸಿ ಆರ್‌ಕೆಎಸ್‌ ಜಿಲ್ಲಾ ಸಮಿತಿ ವತಿಯಿಂದ ಡಿಸಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

Advertisement

ಭಾರತದ ರೈತರಿಗೆ ಮರಣಶಾಸನವಾದ ಆರ್‌ಸಿಇಪಿ ಒಪ್ಪಂದದಿಂದ ಹೊರಬಂದು ಹಾಲು ಉತ್ಪನ್ನಗಳ ಮುಕ್ತ ವ್ಯಾಪಾರ ಒಪ್ಪಂದ ತಿರಸ್ಕರಿಸಬೇಕು. ಇದರೊಂದಿಗೆ ಹಾಲು ಉತ್ಪಾದಕರಿಗೆ ಹೆಚ್ಚಿನ ಸಬ್ಸಿಡಿ ನೀಡಿ ದೇಶದಲ್ಲಿ ಹೈನುಗಾರಿಕೆ ಪ್ರೋತ್ಸಾಹಿಸಬೇಕು ಎಂದು ಆಗ್ರಹಿಸಲಾಯಿತು. ಆರ್‌ಕೆಎಸ್‌ ರಾಜ್ಯ ಖಜಾಂಚಿ ವಿ. ನಾಗಮ್ಮಾಳ್‌ ಮಾತನಾಡಿ, ಕೃಷಿ ಉತ್ಪನ್ನಗಳನ್ನೂ ಒಳಗೊಂಡಿರುವಂತಹ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ-ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಅಂಕಿತ ಹಾಕಲು ಮುಂದಾಗಿದೆ. ಕೃಷಿ-ಹೈನುಗಾರಿಕೆ ನಂಬಿ ಜೀವನ ನಡೆಸುತ್ತಿರುವ ರೈತ-ಕೃಷಿಕಾರ್ಮಿಕರ ಪಾಲಿಗೆ ಈ ಒಪ್ಪಂದವು ಮರಣ ಶಾಸನವಾಗಲಿದೆ.

ಈ ಒಪ್ಪಂದ ಜಾರಿಯಾದರೆ ವಿದೇಶಿ ಕೃಷಿ ಹಾಗೂ ಡೈರಿ ಉತ್ಪನ್ನಗಳು ದೇಶದ ಮಾರುಕಟ್ಟೆಗೆ ಮುಕ್ತವಾಗಿ ಲಗ್ಗೆ ಹಾಕಲಿವೆ. ಇದರಿಂದ ನಮ್ಮ ದೇಶದ ಕೃಷಿ ಮಾರುಕಟ್ಟೆಯಲ್ಲಿ ನಮ್ಮರೈತರ ಉತ್ಪನ್ನಗಳ ಮಾರಾಟಕ್ಕೆ ಹೊಡೆತ ಬೀಳಲಿದೆ ಎಂದು ಆರೋಪಿಸಿದರು.

ಆರ್‌ಸಿಇಪಿ ಒಪ್ಪಂದ ತಿರಸ್ಕರಿಸಿ ಪಶುಸಂಗೋಪನಾ ಇಲಾಖೆಯನ್ನು ಬಲಪಡಿಸಬೇಕು. ಈ ಮೂಲಕ ಹಾಲು ಒತ್ಪಾದಕರಿಗೆ ಹೆಚ್ಚಿನ ಸಬ್ಸಿಡಿ ನೀಡಿ ದೇಶದಲ್ಲಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾಧ್ಯಕ್ಷ ಲಕ್ಷ್ಮಣ ಜಡಗನ್ನವರ, ಶರಣು ಗೋನವಾರ, ಅಲ್ಲಾವುದ್ದಿನ್‌ ಅಡ್ಲಿ, ಎ.ಎಫ್‌.ಪುರದನ್ನವರ, ಐ.ಬಿ. ನಾಡಿಗೇರ, ಪಿ.ಜಿ. ಕುಲಕರ್ಣಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next