Advertisement

ರಾಧಾ ಕೃಷ್ಣಾ ಮಾಥುರ್ ಲಡಾಖ್ ನ ಪ್ರಥಮ ಲೆಫ್ಟಿನೆಂಟ್ ಗವರ್ನರ್, ಯಾರಿವರು?

09:55 AM Nov 01, 2019 | Nagendra Trasi |

ನವದೆಹಲಿ:ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ಅಂತ್ಯಗೊಂಡಿದ್ದು ಇದೀಗ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ಅಸ್ತಿತ್ವಕ್ಕೆ ಬಂದಿದೆ. ಮಾಜಿ ಐಎಎಸ್ ಅಧಿಕಾರಿ ರಾಧಾ ಕೃಷ್ಣಾ ಮಾಥುರ್ ಲಡಾಖ್ ಕೇಂದ್ರಾಡಳಿತ ಪ್ರದೇಶದ ಮೊದಲ ಲೆಫ್ಟಿನೆಂಟ್ ಗವರ್ನರ್ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

Advertisement

ರಾಧಾ ಕೃಷ್ಣಾ ಮಾಥುರ್ ಅವರು ಚೀಫ್ ಇನ್ ಫಾರ್ಮೆಶನ್ ಕಮಿಷನರ್ ಆಗಿದ್ದು 2018ರಲ್ಲಿ ನಿವೃತ್ತಿಯಾಗಿದ್ದರು. 1977ರ ತ್ರಿಪುರಾ ಕೆಡರ್ ನ ಐಎಎಸ್ ಅಧಿಕಾರಿಯಾಗಿದ್ದರು. ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕವಾಗುವ ಮೊದಲು ನಿವೃತ್ತ ಐಎಎಸ್ ಅಧಿಕಾರಿ ಮಾಥುರ್(65ವರ್ಷ) ಅವರು ಕೇಂದ್ರದ ರಕ್ಷಣಾ ಕಾರ್ಯದರ್ಶಿಯಾಗಿದ್ದರು.

ರಾಧಾಕೃಷ್ಣ ಐಐಟಿ ಕಾನ್ಪುರ್ ಹಳೆ ವಿದ್ಯಾರ್ಥಿಯಾಗಿದ್ದು, ಸ್ಲೋವೇನಿಯಾದ ಐಸಿಪಿಇ(ಇಂಟರ್ ನ್ಯಾಶನಲ್ ಸೆಂಟರ್ ಫಾರ್ ಪ್ರೊಮೋಷನ್ ಆಫ್ ಎಂಟರ್ ಪ್ರೈಸಸ್)ನಲ್ಲಿ ಎಂಬಿಎ ಪದವಿ ಪಡೆದಿದ್ದರು.

ಈ ಮೊದಲು ತ್ರಿಪುರಾದ ಮುಖ್ಯ ಕಾರ್ಯದರ್ಶಿಯಾಗ ಕೆಲಸ ನಿರ್ವಹಿಸಿದ್ದರು. 2011ರಲ್ಲಿ ಯೂನಿಯನ್ ಮೈಕ್ರೋ, ಸಣ್ಣ ಮತ್ತು ಮಧ್ಯಮ ಎಂಟರ್ ಪ್ರೈಸಸ್ ನ ಕಾರ್ಯದರ್ಶಿಯಾಗಿದ್ದರು. ಬಳಿಕ ಡಿಫೆನ್ಸ್ ಪ್ರೊಡಕ್ಷನ್ ಸೆಕ್ರೆಟರಿಯಾಗಿ ನೇಮಕವಾಗಿದ್ದರು. 2015ರಲ್ಲಿ ಚೀಫ್ ಇನ್ ಫಾರ್ಮೆಶನ್ ಕಮಿಷನರ್ ಆಗಿ ಸೇವೆ ಸಲ್ಲಿಸಿ ಮೂರು ವರ್ಷದ ನಂತರ ನಿವೃತ್ತಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.