Advertisement

ಆರ್‌ಜೆಡಿ ನಾಯಕನ ಕೊಂದ ಆರೋಪಿ ಮನೆಗೆ ಬೆಂಕಿ; ಪುತ್ರನ ಹತ್ಯೆ

12:03 PM Jan 02, 2019 | udayavani editorial |

ಪಟ್ನಾ : ಬಿಹಾರದ ನಲಂದಾ ಜಿಲ್ಲೆಯಲ್ಲಿ ಆರ್‌ಜೆಡಿ ನಾಯಕನನ್ನು ಗುಂಡಿಕ್ಕಿ ಸಾಯಿಸಲಾದ ಒಂದು ದಿನದ ತರುವಾಯ ಆಕ್ರೋಶಿತ ಸ್ಥಳೀಯರು, ಕೊಲೆ ಆರೋಪಿಯ ಹದಿಹರೆಯದ ಮಗನನ್ನು ಹೊಡೆದು ಚಚ್ಚಿ ಕೊಂದು ಆರೋಪಿಯ ಮನೆಗೆ ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ.

Advertisement

ಆರೋಪಿಯು ಆರ್‌ಜೆಡಿ ನಾಯಕನನ್ನು ದೀಪ್‌ನಗರ್‌ ಪೊಲೀಸ್‌ ಠಾಣೆ ವ್ಯಾಪ್ತಿಯೊಳಗೆ ಗುಂಡಿಕ್ಕಿ ಕೊಂದಿದ್ದ. ಇದನ್ನು ಅನುಸರಿಸಿ ಆಕ್ರೋಶಿತ ಸ್ಥಳೀಯರು ಆತನ ಮನೆಯ ಮೇಲೆ ದಾಳಿ ನಡೆಸಿ ಆತನ ಮನೆಗೆ ಬೆಂಕಿ ಹಚ್ಚಿದರು. 

ಮಾತ್ರವಲ್ಲದೆ ಆತನ 13ರ ಹರೆಯದ ಪುತ್ರ ನನ್ನು ಹೊಡೆದು ಚಚ್ಚಿ ಸಾಯಿಸಿದರು. 

ಆರ್‌ಜೆಡಿ ನಾಯಕನನ್ನು ಆರೋಪಿಯು ಹಳೇ ವೈಯಕ್ತಿಕ ವೈಷಮ್ಯದಲ್ಲಿ ಕೊಂದಿದ್ದಾನೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ನಲಂದಾ ಎಸ್‌ಡಿಪಿಓ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next