Advertisement

Risk; ಮೊಸಳೆ ಹಿಡಿದು ತಂದು ಮಕ್ಕಳೊಂದಿಗೆ ಈಜಲು ಬಿಟ್ಟ!

01:04 AM Mar 19, 2024 | Team Udayavani |

ನ್ಯೂಯಾರ್ಕ್‌: ಮೊಸಳೆ ಕಂಡರೆ ಒಂದು ಕ್ಷಣ ಹೌಹಾರುವುದು ಸಹಜ. ಆದರೆ ಅಮೆರಿಕದ ಫ್ಲೋರಿಡಾದಲ್ಲಿ ವ್ಯಕ್ತಿ ಬರೋಬ್ಬರಿ 11 ಅಡಿ ಉದ್ದದ ದೈತ್ಯ ಮೊಸಳೆಯನ್ನು ಹಿಡಿದು ತಂದು ಮಕ್ಕಳೊಂದಿಗೆ ಈಜಾಡಲು ಬಿಟ್ಟಿದ್ದಾನೆ ಎಂದರೆ ಆಶ್ಚರ್ಯವೆನಿಸಿದರೂ ನಂಬಲೇ ಬೇಕು. ಇತ್ತೀಚೆಗೆ, ಫ್ಲೋರಿಡಾ ನಿವಾಸಿ ಟೋನಿ ಕ್ಯಾವಲ್ಲರೋ ಎಂಬಾತ ಅಕ್ರಮವಾಗಿ ಗೃಹ ಬಂಧನದಲ್ಲಿಟ್ಟುಕೊಂಡಿದ್ದ ಸುಮಾರು 30 ವರ್ಷ ವಯಸ್ಸಿನ 350ಕೆ.ಜಿ. ತೂಕದ “ಅಲ್ಬರ್ಟ್‌’ ಹೆಸರಿನ ಮೊಸಳೆಯನ್ನು ರಕ್ಷಿಸಿದ್ದಾರೆ. ಅದಕ್ಕೆ ಅನಾರೋಗ್ಯ ಕಾಡುತ್ತಿತ್ತು ಮತ್ತು 2 ಕಣ್ಣುಗಳೂ ಕುರುಡಾಗಿದ್ದವು ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next