Advertisement

ದೇಶದಲ್ಲಿ ಕ್ರೆಡಿಟ್‌ ಕಾರ್ಡ್‌, ಯುಪಿಐ ವ್ಯವಹಾರ ಏರಿಕೆ

12:45 AM Sep 12, 2022 | Team Udayavani |

ಹೊಸದಿಲ್ಲಿ: ದೇಶದಲ್ಲಿ ಕ್ರೆಡಿಟ್‌ ಕಾರ್ಡ್‌ ಮತ್ತು ಯುಪಿಐ ಮೂಲಕ ಪಾವತಿ ಹೆಚ್ಚುತ್ತಿದ್ದು, ಗ್ರಾಹಕರ ಖರೀದಿ ವ್ಯವಹಾರ ವೃದ್ಧಿಯ ಸೂಚನೆಯಾಗಿದೆ.

Advertisement

ಕೋವಿಡ್‌ ಕಾಲದ ಹಿಂಜರಿತವನ್ನು ಹಿಮ್ಮೆಟ್ಟಿಸಿ ಆರ್ಥಿಕ ಚಟುವಟಿಕೆಗಳು ಚೇತರಿಸಿಕೊಳ್ಳುತ್ತಿರುವುದು ಇದರಿಂದ ಸಾಬೀತಾಗಿದೆ ಎಂದು ವಿತ್ತ ತಜ್ಞರು ವಿಶ್ಲೇಷಿಸಿದ್ದಾರೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾಸಿಕ ಅಂಕಿಅಂಶಗಳ ಪ್ರಕಾರ ಗೂಗಲ್‌ ಪೇ, ಫೋನ್‌ಪೇಯಂತಹ ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌ (ಯುಪಿಐ) ಮೂಲಕ ಈ ವರ್ಷದ ಎಪ್ರಿಲ್‌ನಲ್ಲಿ 9.83 ಲಕ್ಷ ಕೋಟಿ ರೂ. ವ್ಯವಹಾರ ನಡೆದಿದ್ದರೆ ಆಗಸ್ಟ್‌ನಲ್ಲಿ ಇದು 10.73 ಲಕ್ಷ ಕೋಟಿ ರೂ.ಗಳಿಗೆ ಏರಿದೆ.

ಹಾಗೆಯೇ ಪಿಒಎಸ್‌ (ಪಾಯಿಂಟ್‌ ಆಫ್ ಸೇಲ್‌) ಕ್ರೆಡಿಟ್‌ ಕಾರ್ಡ್‌ ಪಾವತಿಗಳು ಎಪ್ರಿಲ್‌ನಲ್ಲಿ 29,988 ಕೋಟಿ ರೂ.ಗಳಾಗಿದ್ದರೆ ಆಗಸ್ಟ್‌ನಲ್ಲಿ 32,383 ಕೋಟಿ ರೂ.ಗಳಿಗೆ ಹೆಚ್ಚಿದೆ. ಇ-ಕಾಮರ್ಸ್‌ ವೇದಿಕೆಗಳ ಮೂಲಕ ಎಪ್ರಿಲ್‌ನಲ್ಲಿ 51,375 ಕೋ.ರೂ. ಕ್ರೆಡಿಟ್‌ ಕಾರ್ಡ್‌ ಪಾವತಿಗಳು ನಡೆದಿದ್ದರೆ ಆಗಸ್ಟ್‌ನಲ್ಲಿ ಇದು 55,264 ಕೋ.ರೂ.ಗಳಿಗೆ ಏರಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next