Advertisement

ಜೂನ್ ನಲ್ಲಿ ರಿಷಿ ಬಹುಕೋಟಿ ಬಜೆಟ್‌ ಚಿತ್ರ

03:58 PM May 22, 2023 | Team Udayavani |

ಕವಲುದಾರಿ ಮತ್ತು ಆಪರೇಷನ್‌ ಅಲಮೇಲಮ್ಮ ಖ್ಯಾತಿಯ ರಿಷಿ ಅವರು ನಟಿಸುತ್ತಿರುವ ಬಹುಕೋಟಿ ಬಜೆಟ್‌ನ ಚಿತ್ರವೊಂದು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಸೆಟ್ಟೇರುವ ತಯಾರಿಯಲ್ಲಿದೆ. ಸಿನಿಮಾದ ಹೆಸರು, ನಿರ್ಮಾಣ ಸಂಸ್ಥೆ ಮತ್ತು ತಾರಾ ಬಳಗದ ಬಗ್ಗೆ ಜೂನ್‌ 2ರಂದು ಚಿತ್ರತಂಡ ತಿಳಿಸಲಿದೆ.

Advertisement

ಈ ಚಿತ್ರವನ್ನು ಕೆ.ಎಸ್‌ ನಂದೀಶ್‌ ಅವರು ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ನಂದೀಶ್‌ “ಡಿಯರ್‌ ವಿಕ್ರಂ’ ಎಂಬ ಸಿನಿಮಾ ಮಾಡಿದ್ದರು. ನೀನಾಸಂ ಸತೀಶ್‌ ನಾಯಕರಾಗಿದ್ದ ಈ ಚಿತ್ರ ಓಟಿಟಿಯಲ್ಲಿ ರಿಲೀಸ್‌ ಆಗಿತ್ತು.

ಈ ಕುರಿತು ಮಾತನಾಡುವ ನಂದೀಶ್‌, “ನೈಜ ಘಟನೆಗಳ ಆದರಿಸಿದ ಚಿತ್ರ ಡಿಯರ್‌ ವಿಕ್ರಂ ನಕ್ಸಲ್‌ ಮತ್ತು ರಾಜಕೀಯ ಕಥಾಂದರಗಳನ್ನು ಒಳಗೊಂಡ ಚಿತ್ರವಾಗಿತ್ತು.

ಓಟಿಟಿಯಲ್ಲಿ ಬಿಡುಗಡೆಗೊಂಡ ನಂತರ ತುಂಬಾ ಜನ ಇದು ಥಿಯೇಟರ್‌ ನಲ್ಲಿ ಬಿಡುಗಡೆ ಆಗಬೇಕಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗ ಹೊಸ ಚಿತ್ರ ಚಿತ್ರಮಂದಿರದಲ್ಲೇ ತೆರೆಕಾಣಲಿದೆ.

Advertisement

Udayavani is now on Telegram. Click here to join our channel and stay updated with the latest news.

Next