Advertisement

ಕುಟುಂಬವೇ ನನಗೆಲ್ಲ: ರಿಷಿ ಸುನಾಕ್

10:13 PM Jul 24, 2022 | Team Udayavani |

ಲಂಡನ್‌: ಬ್ರಿಟನ್‌ನ ಪ್ರಧಾನಿ ಚುನಾವಣೆಯ ಸ್ಪರ್ಧೆಯಲ್ಲಿರುವ  ಇನ್ಫೋಸಿಸ್‌ನ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಾಕ್‌ “ಕುಟುಂಬವೇ ನನಗೆಲ್ಲ’ ಎನ್ನುವ ಮೂಲಕ ಗಮನ ಸೆಳೆದಿದ್ದಾರೆ.

Advertisement

ಪತ್ನಿ ಅಕ್ಷತಾ ಮೂರ್ತಿ(ನಾರಾಯಣ ಮೂರ್ತಿ ಅವರ ಪುತ್ರಿ) ಹಾಗೂ ಇಬ್ಬರು ಮಕ್ಕಳೊಂದಿಗಿರುವ ತಾವಿರುವ ಫೋಟೋವನ್ನು ಹಂಚಿಕೊಂಡಿರುವ ರಿಷಿ, “ನನಗೆ ಕುಟುಂಬವೇ ಎಲ್ಲಾ. ಗ್ರಾಥಂನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಕುಟುಂಬದ ಬೆಂಬಲ ಸಿಕ್ಕಿದ್ದಕ್ಕೆ ಕೃತಜ್ಞನಾಗಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ಇದೇ ಮೊದಲ ಬಾರಿಗೆ ಅಕ್ಷತಾ ಮತ್ತು ಮಕ್ಕಳಾದ ಕೃಷ್ಣ ಹಾಗೂ ಅನುಷ್ಕಾ, ರಿಷಿ ಅವರ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಬ್ರಿಟನ್‌ನ ಕನ್ಸರ್ವೇಟಿವ್‌ ಪಕ್ಷದ ಮುಖ್ಯಸ್ಥ ಹಾಗೂ ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ಈಗಾಗಲೇ ಪಕ್ಷದಲ್ಲಿ ಒಟ್ಟು 5 ಸುತ್ತಿನ ಆಂತರಿಕ ಚುನಾವಣೆ ನಡೆದಿದೆ. ಅದರಲ್ಲಿ ರಿಷಿ ಅತ್ಯಂತ ಹೆಚ್ಚು ಮತಗಳಿಂದ ಗೆದ್ದಿದ್ದು, ಕೊನೆಯ ಸುತ್ತಿನಲ್ಲಿ ಲಿಜ್‌ ಟ್ರಸ್‌ ಜತೆಗೆ ಸ್ಪರ್ಧಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next