Advertisement

ಲಂಡನ್ ನಲ್ಲಿ ರಿಷಿ ಸುನಾಕ್ ಪುತ್ರಿಯ ಕೂಚಿಪುಡಿ ನೃತ್ಯ ಪ್ರದರ್ಶನ

09:49 AM Nov 26, 2022 | Team Udayavani |

ಲಂಡನ್: ಇಂಗ್ಲೆಂಡ್ ನ ಪ್ರಧಾನಿ ರಿಷಿ ಸುನಾಕ್ ಅವರ ಪುತ್ರಿ ಅನೌಶ್ಕಾ ಸುನಾಕ್ ಲಂಡನ್ ನ ಇತರ ಮಕ್ಕಳೊಂದಿಗೆ ಕೂಚಿಪುಡಿ ನೃತ್ಯದಲ್ಲಿ ಶುಕ್ರವಾರ ಪಾಲ್ಗೊಂಡಿದ್ದರು.

Advertisement

ಒಂಬತ್ತು ವರ್ಷದ ಅನೌಶ್ಕಾ ‘ರಂಗ್’- ಇಂಟರ್ ನ್ಯಾಶನಲ್ ಕೂಚಿಪುಡಿ ಡ್ಯಾನ್ಸ್ ಫೆಸ್ಟಿವಲ್ 2022 ರಲ್ಲಿ ಪ್ರದರ್ಶನ ನೀಡಿದರು. ಇದು ಇಂಗ್ಲೆಂಡ್ ನಲ್ಲಿ ಈ ನೃತ್ಯ ಪ್ರಕಾರದ ಅತಿದೊಡ್ಡ ಉತ್ಸವವಾಗಿದೆ.

ಸಂಗೀತಗಾರರು, ಹಿರಿಯ ಸಮಕಾಲೀನ ನೃತ್ಯ ಕಲಾವಿದರು (65+ ವರ್ಷಗಳ ಪ್ರದರ್ಶನದ ಗುಂಪು), ಕಲಿಕೆಯಲ್ಲಿ ಅಸಮರ್ಥತೆ ಹೊಂದಿರುವ ಗಾಲಿಕುರ್ಚಿ ನೃತ್ಯಗಾರ್ತಿ, ಪೋಲೆಂಡ್‌ ನ ನಟರಂಗ್ ಗ್ರೂಪ್‌ ನ ಅಂತಾರಾಷ್ಟ್ರೀಯ ಬರ್ಸರಿ ವಿದ್ಯಾರ್ಥಿಗಳು ಸೇರಿದಂತೆ 4-85 ವರ್ಷ ವಯಸ್ಸಿನ ಸುಮಾರು 100 ಕಲಾವಿದರು ಕಾರ್ಯಕ್ರಮದ ಭಾಗವಾಗಿದ್ದರು.

ಇದನ್ನೂ ಓದಿ:‘ತ್ರಿಬಲ್‌ ರೈಡಿಂಗ್‌’ ಚಿತ್ರ ವಿಮರ್ಶೆ: ಫ್ಯಾಮಿಲಿ ಡ್ರಾಮಾದಲ್ಲಿ ಗೋಲ್ಡನ್‌ ರಂಗು

ಇಂಗ್ಲೆಂಡ್ ನ 57ನೇ ಪ್ರಧಾನ ಮಂತ್ರಿಯಾಗಿರುವ ರಿಷಿ ಸುನಾಕ್ ಅವರು ಭಾರತೀಯ ಮೂಲದವರು. ಅವರು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಅವರನ್ನು ವರಿಸಿದ್ದಾರೆ. ಈ ದಂಪತಿಗೆ ಕೃಷ್ಣ ಮತ್ತು ಅನೌಷ್ಕಾ ಎಂಬಿಬ್ಬರು ಮಕ್ಕಳಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next