ಲಂಡನ್: ಜನಾಂಗೀಯ ನಿಂದನೆಯ ಪ್ರಕರಣಗಳನ್ನು ಮಟ್ಟ ಹಾಕಲೇಬೇಕು ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ.
Advertisement
ಲಂಡನ್‌ನಲ್ಲಿ ಮಾತನಾಡಿದ ಅವರು, ತಾವು ಸಣ್ಣವರಾಗಿದ್ದಾಗ ಜನಾಂಗೀಯ ನಿಂದನೆಗೆ ಒಳಗಾಗಿದ್ದುದನ್ನು ಸ್ಮರಿಸಿದರು. ಆದರೆ, ಈಗ ಅಂಥ ಪರಿಸ್ಥಿತಿ ಇಲ್ಲ. ಜನಾಂಗೀಯ ನಿಂದನೆಯ ಪ್ರಕರಣಗಳನ್ನು ನಿಭಾಯಿಸುವಲ್ಲಿ ನಮ್ಮ ದೇಶ ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದರು.
ಆದರೆ, ಇದು ಸಾಲದು ಎಂದು ಹೇಳಿರುವ ಅವರು, ಅಂಥ ಪ್ರಕರಣಗಳು ದೃಢಪಟ್ಟಾಗ ದೃಢ ನಿಲುವಿನಿಂದ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.