Advertisement

ಬ್ರಿಟನ್‌ ಜನತೆಗೆ ಹಲವಾರು ಆಶ್ವಾಸನೆ ಕೊಟ್ಟ ರಿಷಿ ಸುನಾಕ್‌

10:17 PM Jul 23, 2022 | Team Udayavani |

ಲಂಡನ್‌: ಯುನೈಟೆಡ್‌ ಕಿಂಗ್‌ಡಂನ ಪ್ರಧಾನಿ ಚುನಾವಣೆಯ ಸ್ಪರ್ಧೆಯಲ್ಲಿರುವ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಾಕ್‌ ಬ್ರಿಟನ್‌ ಜನತೆಗೆ ಹಲವಾರು ಆಶ್ವಾಸನೆಗಳನ್ನು ಕೊಟ್ಟಿದ್ದಾರೆ.

Advertisement

“ಸರ್ಕಾರದಲ್ಲಿ ಕೆಲಸ ಮಾಡಿರುವ ನನಗೆ ಆಡಳಿತ ಸರಿಯಾದ ಹಳಿಯಲ್ಲಿಲ್ಲ ಎಂದು ತಿಳಿದಿದೆ. ನಾನು ಪ್ರಧಾನಿಯಾಗಿ ಆಯ್ಕೆಯಾದ ಮೊದಲನೇ ದಿನದಿಂದಲೇ ಆಡಳಿತವನ್ನು ಸರಿಯಾದ ಹಳಿಗೆ ತರಲು ಪ್ರಯತ್ನಿಸುತ್ತೇನೆ. ನಮ್ಮ ದೇಶ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ’ ಎಂದಿದ್ದಾರೆ ಮಾಜಿ ವಿತ್ತ ಸಚಿವ. ಕನ್ಸರ್ವೇಟಿವ್‌ ಪಕ್ಷದಲ್ಲಿ ಪ್ರಧಾನಿ ಹುದ್ದೆಗೆ ಅಭ್ಯರ್ಥಿಯಾಗಲು ಈಗಾಗಲೇ ಐದು ಸುತ್ತಿನ ಚುನಾವಣೆ ನಡೆದಿದೆ.

ಐದರಲ್ಲೂ ಮೊದಲ ಸ್ಥಾನವನ್ನು ರಿಷಿ ಗಿಟ್ಟಿಸಿಕೊಂಡಿದ್ದಾರೆ. ಕೊನೆಯ ಸುತ್ತಿನಲ್ಲಿ ಅವರು ವಿದೇಶಾಂಗ ಕಾರ್ಯದರ್ಶಿ ಲಿಜ್‌ ಟ್ರಸ್‌ ಒಂದಿಗೆ ಸ್ಪರ್ಧಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next