Advertisement

ಫ್ಯಾಮಿಲಿ ಫೋಟೋಶೂಟ್‌ ಶೇರ್‌ ಮಾಡಿದ ರಿಷಭ್‌ ಶೆಟ್ಟಿ

12:57 PM May 10, 2023 | Team Udayavani |

ಸದ್ಯ ನಟ ಕಂ ನಿರ್ದೇಶಕ ರಿಷಭ್‌ ಶೆಟ್ಟಿ ತಮ್ಮ ತಂಡದ ಜೊತೆಗೆ “ಕಾಂತಾರ’ ಪಾರ್ಟ್‌ 2 ಸಿನಿಮಾದ ಕೆಲಸದಲ್ಲಿ ಬಿಝಿಯಾಗಿದ್ದಾರೆ. ಇದರ ನಡುವೆಯೇ ರಿಷಭ್‌ ಶೆಟ್ಟಿ ತಮ್ಮ ಫ್ಯಾಮಿಲಿ ಜೊತೆಗಿನ ಹೊಸ ಫೋಟೋಶೂಟ್‌ನ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Advertisement

ಇತ್ತೀಚೆಗಷ್ಟೇ ರಿಷಭ್‌ ಶೆಟ್ಟಿ ತಮ್ಮ ಪುತ್ರನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದರು. ಹುಟ್ಟುಹಬ್ಬದಂದು ತೆಗೆದ ಫೋಟೋಗಳನ್ನ ಇದೀಗ ರಿಷಭ್‌ ಶೇರ್‌ ಮಾಡಿದ್ದಾರೆ.

ಸುಂದರ ಹಸಿರು ಹಿನ್ನೆಲೆಯ ಪರಿಸರದಲ್ಲಿ ರಿಷಭ್‌ ಫ್ಯಾಮಿಲಿಯ ಚೆಂದದ ಫೋಟೋಶೂಟ್‌ನಲ್ಲಿ ರಿಷಭ್‌ ಇಬ್ಬರು ಮುದ್ದಾದ ಮಕ್ಕಳು, ಪತ್ನಿ ಪ್ರಗತಿ ಜೊತೆ ಮಿಂಚಿದ್ದಾರೆ. ಇದೀಗ ಈ ಫೋಟೋಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next