ದುಬಾೖ: 2022ರ ಐಸಿಸಿ ಟೆಸ್ಟ್ ಹಾಗೂ ಏಕದಿನ ತಂಡಗಳು ಪ್ರಕಟಗೊಂಡಿವೆ. ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯನೆಂದರೆ ರಿಷಭ್ ಪಂತ್. ಏಕದಿನ ತಂಡದಲ್ಲಿ ಭಾರತದ ಇಬ್ಬರಿದ್ದಾರೆ. ಇವರೆಂದರೆ ಶ್ರೇಯಸ್ ಅಯ್ಯರ್ ಮತ್ತು ಮೊಹಮ್ಮದ್ ಸಿರಾಜ್.
ಭೀಕರ ಕಾರು ಅಪಘಾತಕ್ಕೆ ಸಿಲುಕಿ ಚೇತರಿಸಿಕೊಳ್ಳುತ್ತಿರುವ ರಿಷಭ್ ಪಂತ್ ಕಳೆದ ವರ್ಷದ 12 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 61.81ರ ಸರಾಸರಿಯೊಂದಿಗೆ 680 ರನ್ ಗಳಿಸಿದ್ದರು. 2 ಶತಕ ಹಾಗೂ 4 ಅರ್ಧ ಶತಕ ಇದರಲ್ಲಿ ಸೇರಿದೆ.
ಏಕದಿನದಲ್ಲಿ ಮಿಂಚಿದ ಶ್ರೇಯಸ್ ಅಯ್ಯರ್ 17 ಪಂದ್ಯಗಳಿಂದ 724 ರನ್ ಪೇರಿಸಿದ್ದಾರೆ. ಒಂದು ಶತಕದ ಜತೆಗೆ 6 ಅರ್ಧ ಶತಕಗಳು ಇದರಲ್ಲಿ ಒಳಗೊಂಡಿವೆ. ಮೊಹಮ್ಮದ್ ಸಿರಾಜ್ 15 ಏಕದಿನಗಳಿಂದ ಸರ್ವಾಧಿಕ 24 ವಿಕೆಟ್ ಕೆಡವಿದ ಸಾಧನೆಗೈದಿದ್ದಾರೆ.