Advertisement

ಪಂತ್‌ ಸೆಂಚುರಿ; ಭಾರತ ಸರಣಿ ಜಯಭೇರಿ

10:14 AM Jul 18, 2022 | Team Udayavani |

ಮ್ಯಾಂಚೆಸ್ಟರ್‌: ರಿಷಭ್‌ ಪಂತ್‌ ಅವರ ಅತ್ಯಮೋಘ ಶತಕ ಹಾಗೂ ಹಾರ್ದಿಕ್‌ ಪಾಂಡ್ಯ ಅವರ ಆಲ್‌ರೌಂಡ್‌ ಪ್ರದರ್ಶನದಿಂದ 3ನೇ ಪಂದ್ಯದಲ್ಲಿ ವಿಶ್ವ ಚಾಂಪಿಯನ್‌ ಇಂಗ್ಲೆಂಡಿಗೆ 5 ವಿಕೆಟ್‌ಗಳ ಸೋಲುಣಿಸಿದ ಭಾರತ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ.

Advertisement

ಮತ್ತೆ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್‌ 45.5 ಓವರ್‌ಗಳಲ್ಲಿ 259 ರನ್ನಿಗೆ ಆಲೌಟ್‌ ಆಯಿತು. ಭಾರತ 42.1 ಓವರ್‌ಗಳಲ್ಲಿ 5 ವಿಕೆಟಿಗೆ 261 ರನ್‌ ಬಾರಿಸಿ ಅಸಾಮಾನ್ಯ ಬ್ಯಾಟಿಂಗ್‌ ಸಾಹಸವೊಂದಕ್ಕೆ ಸಾಕ್ಷಿಯಾಯಿತು.

ರಿಷಭ್‌ ಪಂತ್‌ ಚೊಚ್ಚಲ ಏಕದಿನ ಶತಕ ಬಾರಿಸಿ ಓಲ್ಡ್‌ ಟ್ರಾಫ‌ರ್ಡ್‌ ಹೀರೋ ಎನಿಸಿದರು. ಅವರ ಫಿನಿಶಿಂಗ್‌ ಅಂತೂ ಅತ್ಯಾಕರ್ಷಕವಾಗಿತ್ತು. ಡೇವಿಡ್‌ ವಿಲ್ಲಿ ಅವರ ಓವರ್‌ನಲ್ಲಿ ಸತತ 5 ಬೌಂಡರಿ ಸೇರಿದಂತೆ 21 ರನ್‌ ಚಚ್ಚಿದರು. ಬಳಿಕ ರೂಟ್‌ ಎಸೆತವನ್ನು ರಿವರ್ಸ್‌ ಸ್ವೀಪ್‌ ಮೂಲಕ ಬೌಂಡರಿಗೆ ಬಡಿದಟ್ಟಿ ಭಾರತದ ಜಯಭೇರಿ ಮೊಳಗಿಸಿದರು. ಪಂತ್‌ ಗಳಿಕೆ 113 ಎಸೆತಗಳಿಂದ 125 ರನ್‌. 16 ಫೋರ್‌, 2 ಸಿಕ್ಸರ್‌ಗಳಿಂದ ಅವರ ಇನ್ನಿಂಗ್ಸ್‌ ರಂಗೇರಿಸಿಕೊಂಡಿತು.

 

Koo App

ಭಾರತದ ಆರಂಭ ಆಘಾತಕಾರಿಯಾಗಿತ್ತು. ರೀಸ್‌ ಟಾಪ್ಲಿ ಮತ್ತೂಂದು ಟಾಪ್‌ ಕ್ಲಾಸ್‌ ಬೌಲಿಂಗ್‌ ಮೂಲಕ ಧವನ್‌, ರೋಹಿತ್‌ ಮತ್ತು ಕೊಹ್ಲಿ ವಿಕೆಟ್‌ಗಳನ್ನು 38 ರನ್‌ ಆಗುವಷ್ಟರಲ್ಲಿ ಉರುಳಿಸಿದರು. ಸೂರ್ಯಕುಮಾರ್‌ ಕೂಡ ಸಿಡಿಯಲು ವಿಫ‌ಲ ರಾದರು. 72 ರನ್ನಿಗೆ 4 ವಿಕೆಟ್‌ ಬಿತ್ತು. ಆಗ ಇಂಗ್ಲೆಂಡ್‌ಗೆ ಗೆಲುವಿನ ಅವಕಾಶ ಹೆಚ್ಚಿತ್ತು.

ಈ ಹಂತದಲ್ಲಿ ಜತೆಗೂಡಿದ ರಿಷಭ್‌ ಪಂತ್‌-ಹಾರ್ದಿಕ್‌ ಪಾಂಡ್ಯ ಅಮೋಘ ಜತೆಯಾಟ ನಡೆಸಿ ಪಂದ್ಯದ ಗತಿಯನ್ನೇ ಬದಲಿಸಿದರು. 5ನೇ ವಿಕೆಟಿಗೆ 115 ಎಸೆತಗಳಿಂದ 133 ರನ್‌ ರಾಶಿ ಹಾಕಿ ಇಂಗ್ಲೆಂಡ್‌ ಬೌಲರ್‌ಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಬೌಲಿಂಗ್‌ನಲ್ಲಿ 4 ವಿಕೆಟ್‌ ಉಡಾಯಿಸಿದ ಮಿಂಚಿದ ಪಾಂಡ್ಯ 55 ಎಸೆತಗಳಿಂದ 71 ರನ್‌ ಬಾರಿಸಿದರು. ಇದು 10 ಬೌಂಡರಿಗಳನ್ನು ಒಳಗೊಂಡಿತ್ತು.

 

ಸಿರಾಜ್‌, ಪಾಂಡ್ಯ ದಾಳಿ
ಭಾರತದ ಬೌಲಿಂಗ್‌ ಸರದಿಯಲ್ಲಿ ಮಿಂಚಿದ ಹಾರ್ದಿಕ್‌ ಪಾಂಡ್ಯ 24ಕ್ಕೆ 4 ವಿಕೆಟ್‌ ಉಡಾಯಿಸಿದರು. ಇದು ಅವರ ಜೀವನಶ್ರೇಷ್ಠ ಸಾಧನೆ. 7 ಓವರ್‌ಗಳಲ್ಲಿ ಮೂರನ್ನು ಮೇಡನ್‌ ಮಾಡುವ ಮೂಲಕವೂ ಗಮನ ಸೆಳೆದರು. 2016ರ ನ್ಯೂಜಿಲ್ಯಾಂಡ್‌ ಎದುರಿನ ಧರ್ಮಶಾಲಾ ಪದಾರ್ಪಣ ಪಂದ್ಯದಲ್ಲಿ 31ಕ್ಕೆ 3 ವಿಕೆಟ್‌ ಉರುಳಿಸಿದ್ದು ಪಾಂಡ್ಯ ಅವರ ಈವರೆಗಿನ ಅತ್ಯುತ್ತಮ ಬೌಲಿಂಗ್‌ ಆಗಿತ್ತು.

ಟೀಮ್‌ ಇಂಡಿಯಾದ ಮತ್ತೋರ್ವ ಯಶಸ್ವಿ ಬೌಲರ್‌ ಮೊಹಮ್ಮದ್‌ ಸಿರಾಜ್‌. ಬೆನ್ನು ನೋವಿನಿಂದಾಗಿ ಹೊರಗುಳಿದ ಜಸ್‌ಪ್ರೀತ್‌ ಬುಮ್ರಾ ಸ್ಥಾನಕ್ಕೆ ಬಂದ ಸಿರಾಜ್‌ ತಮ್ಮ ಮೊದಲ ಓವರ್‌ನಲ್ಲೇ ಜಾನಿ ಬೇರ್‌ಸ್ಟೊ ಮತ್ತು ಜೋ ರೂಟ್‌ ಅವರನ್ನು ಸೊನ್ನೆಗೆ ಉರುಳಿಸಿ ಭಾರತಕ್ಕೆ ಕನಸಿನ ಆರಂಭ ಒದಗಿಸಿದರು. ಸ್ಪಿನ್ನರ್‌ ಚಹಲ್‌ ಕೆಳ ಕ್ರಮಾಂಕದ 3 ವಿಕೆಟ್‌ ಕೆಡವಿದರು.

ಮೂರೂ ಬೌಲರ್ ಓವರ್‌ ಒಂದರಲ್ಲಿ ಇಬ್ಬರನ್ನು ಔಟ್‌ ಮಾಡಿದ್ದು ಈ ಪಂದ್ಯದ ವಿಶೇಷ. ಸಿರಾಜ್‌ ಬಳಿಕ ಈ ಪರಾಕ್ರಮ ತೋರಿದವರು ಹಾರ್ದಿಕ್‌ ಪಾಂಡ್ಯ. ಪಂದ್ಯದ 37ನೇ ಓವರ್‌ನಲ್ಲಿ ಅವರು ಲಿಯಮ್‌ ಲಿವಿಂಗ್‌ಸ್ಟೋನ್‌ ಮತ್ತು ಜಾಸ್‌ ಬಟ್ಲರ್‌ ವಿಕೆಟ್‌ ಉಡಾಯಿಸಿದರು. ಚಹಲ್‌ ಎಸೆದ ಅಂತಿಮ ಹಾಗೂ 46ನೇ ಓವರ್‌ನಲ್ಲಿ ಕ್ರೆಗ್‌ ಓವರ್ಟನ್‌ ಮತ್ತು ರೀಸ್‌ ಟಾಪ್ಲಿ ಪೆವಿಲಿಯನ್‌ ಸೇರಿಕೊಂಡರು.

ಶಮಿ ಎಸೆದ ಮೊದಲ ಓವರ್‌ನಲ್ಲೇ ರಾಯ್‌ 3 ಬೌಂಡರಿ ಬಾರಿಸುವ ಮೂಲಕ ಇಂಗ್ಲೆಂಡ್‌ಗೆ ಅಬ್ಬರದ ಆರಂಭ ಒದಗಿಸಿದರು. ಆದರೆ ಮುಂದಿನ ಓವರ್‌ನಲ್ಲೇ ಸಿರಾಜ್‌ ಅವಳಿ ಆಘಾತವಿಕ್ಕಿದರು. 12 ರನ್ನಿಗೆ 2 ವಿಕೆಟ್‌ ಬಿತ್ತು.

ಸ್ಕೋರ್‌ ಪಟ್ಟಿ
ಇಂಗ್ಲೆಂಡ್‌
ಜೇಸನ್‌ ರಾಯ್‌ ಸಿ ಪಂತ್‌ ಬಿ ಪಾಂಡ್ಯ 41
ಜಾನಿ ಬೇರ್‌ಸ್ಟೊ ಸಿ ಅಯ್ಯರ್‌ ಬಿ ಸಿರಾಜ್‌ 0
ಜೋ ರೂಟ್‌ ಸಿ ರೋಹಿತ್‌ ಬಿ ಸಿರಾಜ್‌ 0
ಬೆನ್‌ ಸ್ಟೋಕ್ಸ್‌ ಸಿ ಮತ್ತು ಬಿ ಪಾಂಡ್ಯ 27
ಜಾಸ್‌ ಬಟ್ಲರ್‌ ಸಿ ಜಡೇಜ ಬಿ ಪಾಂಡ್ಯ 60
ಮೊಯಿನ್‌ ಅಲಿ ಸಿ ಪಂತ್‌ ಬಿ ಜಡೇಜ 34
ಲಿವಿಂಗ್‌ಸ್ಟೋನ್‌ ಸಿ ಜಡೇಜ ಬಿ ಪಾಂಡ್ಯ 27
ಡೇವಿಡ್‌ ವಿಲ್ಲಿ ಸಿ ಸೂರ್ಯಕುಮಾರ್‌ ಬಿ ಚಹಲ್‌ 18
ಕ್ರೆಗ್‌ ಓವರ್ಟನ್‌ ಸಿ ಕೊಹ್ಲಿ ಬಿ ಚಹಲ್‌ 32
ಬ್ರೈಡನ್‌ ಕಾರ್ಸ್‌ ಔಟಾಗದೆ 3
ರೀಸ್‌ ಟಾಪ್ಲಿ ಬಿ ಚಹಲ್‌ 0
ಇತರ 17
ಒಟ್ಟು (45.5 ಓವರ್‌ಗಳಲ್ಲಿ ಆಲೌಟ್‌) 259
ವಿಕೆಟ್‌ ಪತನ: 1-12, 2-12, 3-66, 4-74, 5-149, 6-198, 7-199, 8-247, 9-257.
ಬೌಲಿಂಗ್‌:
ಮೊಹಮ್ಮದ್‌ ಶಮಿ 7-0-38-0
ಮೊಹಮ್ಮದ್‌ ಸಿರಾಜ್‌ 9-1-66-2
ಪ್ರಸಿದ್ಧ್ ಕೃಷ್ಣ 9-0-48-0
ಹಾರ್ದಿಕ್‌ ಪಾಂಡ್ಯ 7-3-24-4
ಯಜುವೇಂದ್ರ ಚಹಲ್‌ 9.5-0-60-3
ರವೀಂದ್ರ ಜಡೇಜ 4-0-21-1
ಭಾರತ
ರೋಹಿತ್‌ ಶರ್ಮ ಸಿ ರೂಟ್‌ ಬಿ ಟಾಪ್ಲಿ 17
ಶಿಖರ್‌ ಧವನ್‌ ಸಿ ರಾಯ್‌ ಬಿ ಟಾಪ್ಲಿ 1
ವಿರಾಟ್‌ ಕೊಹ್ಲಿ ಸಿ ಬಟ್ಲರ್‌ ಬಿ ಟಾಪ್ಲಿ 17
ರಿಷಭ್‌ ಪಂತ್‌ ಔಟಾಗದೆ 125
ಸೂರ್ಯಕುಮಾರ್‌ ಸಿ ಬಟ್ಲರ್‌ ಬಿ ಓವರ್ಟನ್‌ 16
ಹಾರ್ದಿಕ್‌ ಪಾಂಡ್ಯ ಸಿ ಸ್ಟೋಕ್ಸ್‌ ಬಿ ಕಾರ್ಸ್‌ 71
ರವೀಂದ್ರ ಜಡೇಜ ಔಟಾಗದೆ 7
ಇತರ 7
ಒಟ್ಟು (42.1 ಓವರ್‌ಗಳಲ್ಲಿ 5 ವಿಕೆಟಿಗೆ) 261
ವಿಕೆಟ್‌ ಪತನ: 1-13, 2-21, 3-38, 4-72, 5-205.
ಬೌಲಿಂಗ್‌:
ರೀಸ್‌ ಟಾಪ್ಲಿ 7-1-35-3
ಡೇವಿಡ್‌ ವಿಲ್ಲಿ 7-0-58-0
ಬ್ರೈಡನ್‌ ಕಾರ್ಸ್‌ 8-0-45-1
ಮೊಯಿನ್‌ ಅಲಿ 8-0-33-0
ಕ್ರೆಗ್‌ ಓವರ್ಟನ್‌ 8-0-54-1
ಬೆನ್‌ ಸ್ಟೋಕ್ಸ್‌ 2-0-14-0
ಲಿಯಮ್‌ ಲಿವಿಂಗ್‌ಸ್ಟೋನ್‌ 2-0-14-0
ಜೋ ರೂಟ್‌ 0.1-0-4-0

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next