Advertisement
ಮತ್ತೆ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ 45.5 ಓವರ್‌ಗಳಲ್ಲಿ 259 ರನ್ನಿಗೆ ಆಲೌಟ್ ಆಯಿತು. ಭಾರತ 42.1 ಓವರ್‌ಗಳಲ್ಲಿ 5 ವಿಕೆಟಿಗೆ 261 ರನ್ ಬಾರಿಸಿ ಅಸಾಮಾನ್ಯ ಬ್ಯಾಟಿಂಗ್ ಸಾಹಸವೊಂದಕ್ಕೆ ಸಾಕ್ಷಿಯಾಯಿತು.
Koo AppRelated Articles
Koo AppQuality knock and a great ton by #RishabhPant In a series decider when it matters most and an amazing all-round performance by #HardikPandyahe is clearly one of the best allrounders in the world right now. Great win.
Very well done team india
#ENGvIND #Cricketonkoo – mona meshram (@monameshram30) 17 July 2022
ಭಾರತದ ಬೌಲಿಂಗ್ ಸರದಿಯಲ್ಲಿ ಮಿಂಚಿದ ಹಾರ್ದಿಕ್ ಪಾಂಡ್ಯ 24ಕ್ಕೆ 4 ವಿಕೆಟ್ ಉಡಾಯಿಸಿದರು. ಇದು ಅವರ ಜೀವನಶ್ರೇಷ್ಠ ಸಾಧನೆ. 7 ಓವರ್‌ಗಳಲ್ಲಿ ಮೂರನ್ನು ಮೇಡನ್ ಮಾಡುವ ಮೂಲಕವೂ ಗಮನ ಸೆಳೆದರು. 2016ರ ನ್ಯೂಜಿಲ್ಯಾಂಡ್ ಎದುರಿನ ಧರ್ಮಶಾಲಾ ಪದಾರ್ಪಣ ಪಂದ್ಯದಲ್ಲಿ 31ಕ್ಕೆ 3 ವಿಕೆಟ್ ಉರುಳಿಸಿದ್ದು ಪಾಂಡ್ಯ ಅವರ ಈವರೆಗಿನ ಅತ್ಯುತ್ತಮ ಬೌಲಿಂಗ್ ಆಗಿತ್ತು. ಟೀಮ್ ಇಂಡಿಯಾದ ಮತ್ತೋರ್ವ ಯಶಸ್ವಿ ಬೌಲರ್ ಮೊಹಮ್ಮದ್ ಸಿರಾಜ್. ಬೆನ್ನು ನೋವಿನಿಂದಾಗಿ ಹೊರಗುಳಿದ ಜಸ್‌ಪ್ರೀತ್ ಬುಮ್ರಾ ಸ್ಥಾನಕ್ಕೆ ಬಂದ ಸಿರಾಜ್ ತಮ್ಮ ಮೊದಲ ಓವರ್‌ನಲ್ಲೇ ಜಾನಿ ಬೇರ್‌ಸ್ಟೊ ಮತ್ತು ಜೋ ರೂಟ್ ಅವರನ್ನು ಸೊನ್ನೆಗೆ ಉರುಳಿಸಿ ಭಾರತಕ್ಕೆ ಕನಸಿನ ಆರಂಭ ಒದಗಿಸಿದರು. ಸ್ಪಿನ್ನರ್ ಚಹಲ್ ಕೆಳ ಕ್ರಮಾಂಕದ 3 ವಿಕೆಟ್ ಕೆಡವಿದರು. ಮೂರೂ ಬೌಲರ್ ಓವರ್ ಒಂದರಲ್ಲಿ ಇಬ್ಬರನ್ನು ಔಟ್ ಮಾಡಿದ್ದು ಈ ಪಂದ್ಯದ ವಿಶೇಷ. ಸಿರಾಜ್ ಬಳಿಕ ಈ ಪರಾಕ್ರಮ ತೋರಿದವರು ಹಾರ್ದಿಕ್ ಪಾಂಡ್ಯ. ಪಂದ್ಯದ 37ನೇ ಓವರ್‌ನಲ್ಲಿ ಅವರು ಲಿಯಮ್ ಲಿವಿಂಗ್‌ಸ್ಟೋನ್ ಮತ್ತು ಜಾಸ್ ಬಟ್ಲರ್ ವಿಕೆಟ್ ಉಡಾಯಿಸಿದರು. ಚಹಲ್ ಎಸೆದ ಅಂತಿಮ ಹಾಗೂ 46ನೇ ಓವರ್‌ನಲ್ಲಿ ಕ್ರೆಗ್ ಓವರ್ಟನ್ ಮತ್ತು ರೀಸ್ ಟಾಪ್ಲಿ ಪೆವಿಲಿಯನ್ ಸೇರಿಕೊಂಡರು. ಶಮಿ ಎಸೆದ ಮೊದಲ ಓವರ್‌ನಲ್ಲೇ ರಾಯ್ 3 ಬೌಂಡರಿ ಬಾರಿಸುವ ಮೂಲಕ ಇಂಗ್ಲೆಂಡ್‌ಗೆ ಅಬ್ಬರದ ಆರಂಭ ಒದಗಿಸಿದರು. ಆದರೆ ಮುಂದಿನ ಓವರ್‌ನಲ್ಲೇ ಸಿರಾಜ್ ಅವಳಿ ಆಘಾತವಿಕ್ಕಿದರು. 12 ರನ್ನಿಗೆ 2 ವಿಕೆಟ್ ಬಿತ್ತು. ಸ್ಕೋರ್ ಪಟ್ಟಿ
ಇಂಗ್ಲೆಂಡ್
ಜೇಸನ್ ರಾಯ್ ಸಿ ಪಂತ್ ಬಿ ಪಾಂಡ್ಯ 41
ಜಾನಿ ಬೇರ್‌ಸ್ಟೊ ಸಿ ಅಯ್ಯರ್ ಬಿ ಸಿರಾಜ್ 0
ಜೋ ರೂಟ್ ಸಿ ರೋಹಿತ್ ಬಿ ಸಿರಾಜ್ 0
ಬೆನ್ ಸ್ಟೋಕ್ಸ್ ಸಿ ಮತ್ತು ಬಿ ಪಾಂಡ್ಯ 27
ಜಾಸ್ ಬಟ್ಲರ್ ಸಿ ಜಡೇಜ ಬಿ ಪಾಂಡ್ಯ 60
ಮೊಯಿನ್ ಅಲಿ ಸಿ ಪಂತ್ ಬಿ ಜಡೇಜ 34
ಲಿವಿಂಗ್‌ಸ್ಟೋನ್ ಸಿ ಜಡೇಜ ಬಿ ಪಾಂಡ್ಯ 27
ಡೇವಿಡ್ ವಿಲ್ಲಿ ಸಿ ಸೂರ್ಯಕುಮಾರ್ ಬಿ ಚಹಲ್ 18
ಕ್ರೆಗ್ ಓವರ್ಟನ್ ಸಿ ಕೊಹ್ಲಿ ಬಿ ಚಹಲ್ 32
ಬ್ರೈಡನ್ ಕಾರ್ಸ್ ಔಟಾಗದೆ 3
ರೀಸ್ ಟಾಪ್ಲಿ ಬಿ ಚಹಲ್ 0
ಇತರ 17
ಒಟ್ಟು (45.5 ಓವರ್‌ಗಳಲ್ಲಿ ಆಲೌಟ್) 259
ವಿಕೆಟ್ ಪತನ: 1-12, 2-12, 3-66, 4-74, 5-149, 6-198, 7-199, 8-247, 9-257.
ಬೌಲಿಂಗ್:
ಮೊಹಮ್ಮದ್ ಶಮಿ 7-0-38-0
ಮೊಹಮ್ಮದ್ ಸಿರಾಜ್ 9-1-66-2
ಪ್ರಸಿದ್ಧ್ ಕೃಷ್ಣ 9-0-48-0
ಹಾರ್ದಿಕ್ ಪಾಂಡ್ಯ 7-3-24-4
ಯಜುವೇಂದ್ರ ಚಹಲ್ 9.5-0-60-3
ರವೀಂದ್ರ ಜಡೇಜ 4-0-21-1
ಭಾರತ
ರೋಹಿತ್ ಶರ್ಮ ಸಿ ರೂಟ್ ಬಿ ಟಾಪ್ಲಿ 17
ಶಿಖರ್ ಧವನ್ ಸಿ ರಾಯ್ ಬಿ ಟಾಪ್ಲಿ 1
ವಿರಾಟ್ ಕೊಹ್ಲಿ ಸಿ ಬಟ್ಲರ್ ಬಿ ಟಾಪ್ಲಿ 17
ರಿಷಭ್ ಪಂತ್ ಔಟಾಗದೆ 125
ಸೂರ್ಯಕುಮಾರ್ ಸಿ ಬಟ್ಲರ್ ಬಿ ಓವರ್ಟನ್ 16
ಹಾರ್ದಿಕ್ ಪಾಂಡ್ಯ ಸಿ ಸ್ಟೋಕ್ಸ್ ಬಿ ಕಾರ್ಸ್ 71
ರವೀಂದ್ರ ಜಡೇಜ ಔಟಾಗದೆ 7
ಇತರ 7
ಒಟ್ಟು (42.1 ಓವರ್‌ಗಳಲ್ಲಿ 5 ವಿಕೆಟಿಗೆ) 261
ವಿಕೆಟ್ ಪತನ: 1-13, 2-21, 3-38, 4-72, 5-205.
ಬೌಲಿಂಗ್:
ರೀಸ್ ಟಾಪ್ಲಿ 7-1-35-3
ಡೇವಿಡ್ ವಿಲ್ಲಿ 7-0-58-0
ಬ್ರೈಡನ್ ಕಾರ್ಸ್ 8-0-45-1
ಮೊಯಿನ್ ಅಲಿ 8-0-33-0
ಕ್ರೆಗ್ ಓವರ್ಟನ್ 8-0-54-1
ಬೆನ್ ಸ್ಟೋಕ್ಸ್ 2-0-14-0
ಲಿಯಮ್ ಲಿವಿಂಗ್‌ಸ್ಟೋನ್ 2-0-14-0
ಜೋ ರೂಟ್ 0.1-0-4-0