Advertisement

ಹರಿಕಥೆ ಅಲ್ಲ ಗಿರಿ ಕಥೆ ಟ್ರೈಲರ್ ರಿಲೀಸ್: ಮತ್ತೆ ಪ್ರೇಕ್ಷಕರ ಹುಬ್ಬೇರಿಸಿದ ರಿಷಬ್-ಪ್ರಮೋದ್

03:19 PM Jun 15, 2022 | Team Udayavani |

ಬೆಂಗಳೂರು:ಸಿನಿಮಾದಲ್ಲಿ ನಾಯಕನೇ ಸಿನಿಮಾ ನಿರ್ದೇಶಕನಾಗಿರುವ ಸಾಕಷ್ಟು ವಿಭಿನ್ನ ಚಿತ್ರಕತೆಯ ಸಿನಿಮಾಗಳು ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಬಂದಿವೆ. ಅಂತಹದ್ದೇ ಒಂದು ಕಥೆಯ ಎಳೆಯೊಂದಿಗೆ ವಿಭಿನ್ನ ರೀತಿಯಲ್ಲಿ ಮೂಡಿ ಬರುತ್ತಿರುವ ಡಿಫರೆಂಟ್ ಸ್ಕ್ರಿಪ್ಟ್ ನ ಬಹುನಿರೀಕ್ಷಿತ ಸಿನಿಮಾ ಹರಿಕಥೆ ಅಲ್ಲ ಗಿರಿ ಕಥೆ.

Advertisement

ರಿಷಬ್ ಶೆಟ್ಟಿ ಸಿನಿಮಾಗಳು ಅಂದ ಮೇಲೆ ಆ ಚಿತ್ರದ ಕಥೆ ಹಾಗೂ ಅವರ ಪಾತ್ರದಲ್ಲಿ ಏನೋ ಒಂದು ವಿಶೇಷತೆ ಇದ್ದೇ ಇರುತ್ತೆ ಅನ್ನೋದು ಈ ಸಿನಿಮಾ ಮೂಲಕ ಮತ್ತೆ ಪ್ರೂವ್ ಆಗಿದೆ. ಸದ್ಯ ಚಿತ್ರದ ಟ್ರೈಲರ್ ಹೊರಬಂದಿದ್ದು, ಸಖತ್ ಸೌಂಡ್ ಮಾಡ್ತಿದೆ. ಈ ಚಿತ್ರ ಜೂನ್ 23ರಂದು ತೆರೆ ಕಾಣಲಿದೆ.

ಟೀಸರ್, ಸಾಂಗ್ಸ್ ನೋಡಿ ಖುಷಿಪಟ್ಟಿದ್ದ ಸಿನಿ ಪ್ರೇಮಿಗಳು ಟ್ರೈಲರ್ ಗಾಗಿ ಎದುರು ನೋಡ್ತಿದ್ರು.. ಅದರಂತೆಯೇ ಇದೀಗ ಚಿತ್ರತಂಡ ಕೂಡ ತಮ್ಮ ಸಿನಿಮಾದ ಟ್ರೈಲರ್ ನ್ನು ರಿಲೀಸ್ ಮಾಡಿದೆ. ನಿರ್ದೇಶಕನಾಗೋ ಅಪಾರವಾದ ಕನಸು, ಆಸೆ, ಹಠ, ಛಲ ಹೊತ್ತ ನಾಯಕ ತನ್ನ ಗುರಿಯನ್ನು ಸಾಧಿಸ್ತಾನಾ..? ಅದು ಹೇಗೆ..? ಎಂಬ ಪ್ರಶ್ನೆಗಳಿಗೆ ಇದೀಗ ಹೊರಬಂದಿರೋ ಟ್ರೈಲರ್ ಝಲಕ್ ಲೈಟಾಗಿ ಸುಳಿವು ನೀಡಿದೆ. ರಿಷಬ್ ಶೆಟ್ಟಿ ಅವರ ಪಾತ್ರ ಹಾಗೂ ನಟನಾ ವೈಖರಿ ನೋಡುಗರ ಗಮನ ಸೆಳೆದಿದೆ.

Advertisement

ನಾಯಕಿಯರಾಗಿ ತಪಸ್ವಿನಿ ಹಾಗೂ ರಚನಾ ಇಂದರ್ ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದು, ಚಿತ್ರಕಥೆಯಲ್ಲಿ ಯಾವುದೋ ಟ್ವಿಸ್ಟ್ ಇದೆ ಅನ್ನೋದ್ರಲ್ಲಿ ಸಂದೇಹ ಇಲ್ಲ. ಅಷ್ಟೇ ಅಲ್ಲ ರಿಷಬ್ ಹಾಗೂ ಪ್ರಮೋದ್ ಜೋಡಿ ಇಲ್ಲೂ ಕಾಮಿಡಿ ಕಮಾಲ್ ಮಾಡಿದ್ದಾರೆ. ನೋಡೋಕೆ ಹರಿಕಥೆ ತರಹ ಇರೋ ಈ ನಾಯಕ ಗಿರಿಯ ರಿಯಲ್ ಕಥೆ ಏನು ಅನ್ನೋದನ್ನು ಟ್ರೈಲರ್ ನಲ್ಲಿ ಕೊಂಚ ಗೊಂದಲ ಮಾಡಿ ಹೇಳಲಾಗಿದೆ.

ಕರಣ್ ಅನಂತ್ ಹಾಗೂ ಅನಿರುದ್ಧ್ ಮಹೇಶ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಒಂದು ವಿಭಿನ್ನ ಪ್ರಯತ್ನ ಮಾಡಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಸಂದೇಶ್ ಅವರು ಈ ಸಿನಿಮಾ ನಿರ್ಮಿಸಿದ್ದಾರೆ. ವಾಸುಕಿ ವೈಭವ್ ಮ್ಯೂಸಿಕ್ ನಲ್ಲಿ ಮೂಡಿಬಂದಿರೋ ಹರಿಕಥೆ ಅಲ್ಲಾ ಗಿರಿ ಕಥೆ ಸಿನಿಮಾದ ಹಾಡುಗಳು ಈಗಾಗ್ಲೇ ಹಿಟ್ ಆಗಿವೆ. ಸದ್ಯ ಹೊರಬಂದಿರೋ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ವೈರಲ್ ಆಗಿದ್ದು, ತನ್ನದೇ ಹವಾ ಸೃಷ್ಟಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next