ತೆಕ್ಕಟ್ಟೆ: ನಿರ್ದೇಶಕ, ಚಿತ್ರನಟ ರಿಷಬ್ ಶೆಟ್ಟಿ ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನಕ್ಕೆ ಇಂದು (ಡಿ.5) ಭೇಟಿ ನೀಡಿದರು.
ರಿಷಬ್ ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ವತಿಯಿಂದ ಅವರನ್ನು ಗೌರವಪೂರ್ವಕವಾಗಿ ಸ್ವಾಗತಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮೊಕ್ತೇಸರ ಕೆ. ಶ್ರೀರಮಣ ಉಪಾಧ್ಯಾಯ, ಹಿರಿಯ ಮೊಕ್ತೇಸರ ಕೆ.ಸೂರ್ಯನಾರಾಯಣ ಉಪಾಧ್ಯಾಯರು, ಪರ್ಯಾಯ ಅರ್ಚಕರಾದ ಕೆ. ದೇವಿದಾಸ ಉಪಾಧ್ಯಾಯ, ಅರ್ಚಕ ಮಂಡಳಿ ಸದಸ್ಯರು ದೇವಳದ ವ್ಯವಸ್ಥಾಪಕರು ಹಾಗು ಸಿಬ್ಬಂದಿ ಉಪಸ್ಥಿತರಿದ್ದರು.
ಕಳೆದ ಆಗಸ್ಟ್ 28 ರಂದು ಈ ದೇವಸ್ಥಾನದಲ್ಲಿ ಪ್ಯಾನ್ ಇಂಡಿಯಾ ಸಿನೆಮಾ ಆಗಿರುವ ಕಾಂತಾರ ಚಿತ್ರದ ಮೂಹೂರ್ತ ನಡೆದಿತ್ತು.