Advertisement

ಹಬ್ಬಗಳ ಹಿನ್ನೆಲೆ: ವಾಹನ ನೋಂದಣಿಯಲ್ಲಿ ಏರಿಕೆ

12:33 AM Nov 19, 2021 | Team Udayavani |

ಮಂಗಳೂರು: ಹಬ್ಬಗಳ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ವಾಹನಗಳ ಖರೀದಿ ಏರಿಕೆಯಾಗಿದ್ದು, ನವೆಂಬರ್‌ನಲ್ಲಿ ಒಟ್ಟು 4,961 ನೋಂದಣಿಯಾಗಿವೆ. ಕೆಲವು ತಿಂಗಳ ಬಳಿಕ ವಾಹನ ಖರೀದಿಗೆ ಇಷ್ಟೊಂದು ಬೇಡಿಕೆ ಇದೇ ಮೊದಲು.

Advertisement

ಈ ವರ್ಷಾರಂಭದಲ್ಲಿ ಕೊರೊನಾ 2ನೇ ಅಲೆಯ ಪ್ರಭಾವ ವಾಹನ ಖರೀದಿಯತ್ತ ಬೀರಿ ಎಪ್ರಿಲ್‌, ಮೇ, ಜೂನ್‌ನಲ್ಲಿ ವಹಿವಾಟು ಕುಂಠಿತಗೊಂಡಿತ್ತು. ಜುಲೈಯಿಂದ ಮತ್ತೆ ಚೇತರಿಕೆಯತ್ತ ಸಾಗಿದ್ದು, ಅಕ್ಟೋಬರ್‌ ಆರಂಭದಲ್ಲಿ ನವರಾತ್ರಿ, ಆಯುಧ ಪೂಜೆಯ ಹಿನ್ನೆಲೆಯಲ್ಲಿ ವಾಹನ ಖರೀದಿ ತುಸು ಏರಿಕೆ ಕಂಡಿತ್ತು. ಇದೀಗ ಪ್ರತೀ ದಿನ 250ಕ್ಕೂ ಹೆಚ್ಚು ನೋಂದಣಿಯಾಗುತ್ತಿವೆ.

ಕಳೆದ ವರ್ಷ ವಾಹನ ಖರೀದಿ ನಿರೀಕ್ಷಿತ  ಮಟ್ಟದಲ್ಲಿರಲಿಲ್ಲ. ಆದರೆ ಈ ವರ್ಷ  ಕಳೆದ ವರ್ಷಕ್ಕಿಂತ ವಾಹನ ಖರೀದಿ ಏರಿಕೆ  ಸಾಧ್ಯತೆ ಇದೆ. ಮಂಗಳೂರು ಆರ್‌ಟಿಒ ವ್ಯಾಪ್ತಿಯಲ್ಲಿ ಕಳೆದ ವರ್ಷ 32,151 ವಾಹನ ನೋಂದಣಿಗೊಂಡಿದ್ದು, ಈ ವರ್ಷ ಈವರೆಗೆ 31,578 ನೋಂದಣಿ ಯಾಗಿವೆ. ಪುತ್ತೂರು ಆರ್‌ಟಿಒದಲ್ಲಿ ಕಳೆದ ವರ್ಷ 10,024 ವಾಹನ, ಈ ವರ್ಷ 9,643 ವಾಹನ, ಬಂಟ್ವಾಳ ತಾಲೂಕಿನಲ್ಲಿ ಕಳೆದ ವರ್ಷ 6,024 ವಾಹನ, ಈ ವರ್ಷ 5,237 ಮತ್ತು ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ 23,228 ವಾಹನ, ಈ ವರ್ಷ 22,452 ವಾಹನ ನೋಂದಣಿಯಾಗಿವೆ.

ಎಲೆಕ್ಟ್ರಿಕ್ ವಾಹನದತ್ತ ಬೇಡಿಕೆ:

ತೈಲ ಬೆಲೆ ಏರಿಕೆಯ ಜತೆಗೆ ಸರಕಾರದ ಸಬ್ಸಿಡಿ ಲಾಭ ಪಡೆಯುವ ಉದ್ದೇಶದಿಂದ ಪರಿಸರ ಸ್ನೇಹಿ ವಾಹನದತ್ತ ಜನ ಆಕರ್ಷಿತರಾಗುತ್ತಿದ್ದಾರೆ. ನವೆಂಬರ್‌ನಲ್ಲಿ ಕರಾವಳಿಯಲ್ಲಿ 222 ಎಲೆಕ್ಟ್ರಿಕ್‌ ವಾಹನಗಳು ನೋಂದಣಿಯಾಗಿವೆ. ಮಂಗಳೂರು ಆರ್‌ಟಿಒದಲ್ಲಿ 126, ಬಂಟ್ವಾಳದಲ್ಲಿ 15, ಪುತ್ತೂರಿನಲ್ಲಿ 30 ಮತ್ತು ಉಡುಪಿಯಲ್ಲಿ 51 ನೋಂದಣಿಯಾಗಿವೆ.

Advertisement

ಕರಾವಳಿಯಲ್ಲಿ ಕಳೆದ ಎರಡು ವಾರಗಳಲ್ಲಿ ಖರೀದಿಯ ವಿವರ:

ಆರ್‌ಟಿಒ        ಬೈಕ್‌   ಕಾರು

ಮಂಗಳೂರು   2,005   517

ಬಂಟ್ವಾಳ       153      37

ಪುತ್ತೂರು       413      83

ಉಡುಪಿ         1,027    252

ನವೆಂಬರ್ನಲ್ಲಿ ನೋಂದಣಿ

ಆರ್ಟಿಒ        ವಾಹನ ಖರೀದಿ

ಮಂಗಳೂರು   2,675

ಪುತ್ತೂರು       573

ಬಂಟ್ವಾಳ       287

ಉಡುಪಿ         1,426

ಒಟ್ಟು  4,961

ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ವಾಹನ ನೋಂದಣಿ ಏರಿಕೆಯಾಗುತ್ತಿದೆ. ಈ ಹಿಂದೆ ಕೊರೊನಾ ಕಾರಣ ಆಟೋಮೊಬೈಲ್‌ ಕ್ಷೇತ್ರದತ್ತ ಗ್ರಾಹಕರು ಅಷ್ಟೊಂದು ಆಸಕ್ತಿ ತೋರುತ್ತಿರಲಿಲ್ಲ. ಕೊರೊನಾ ಕಡಿಮೆಯಾಗು ತ್ತಿದ್ದಂತೆ ಖರೀದಿ ಚೇತರಿಕೆ ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಸಾಧ್ಯತೆ ಇದೆ. ಆರ್. ವರ್ಣೇಕರ್, ಮಂಗಳೂರು ಆರ್ಟಿಒ

ನವೀನ್ ಭಟ್ ಇಳಂತಿಲ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next