ಬ್ರಸೆಲ್ಸ್: ಕತಾರ್ ನಲ್ಲಿ ನಡೆದ ವಿಶ್ವಕಪ್ ಫುಟ್ಬಾಲ್ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಮೊರಾಕ್ಕೊ ಅದ್ಭುತ ಜಯ ಗಳಿಸಿದೆ. ಆದರೆ ಈ ಅನಿರೀಕ್ಷಿತ ಸೋಲನ್ನು ಸೋಲನ್ನು ಅರಗಿಸಿಕೊಳ್ಳಲಾಗದ ಬೆಲ್ಜಿಯಂ ಅಭಿಯಾನಿಗಳು ದಂಗೆ ಎಬ್ಬಿಸಿದ್ದಾರೆ.
ಕೆಲ ಅಭಿಮಾನಿಗಳು ಬ್ರಸೆಲ್ಸ್ ನಲ್ಲಿ ಕಾರು ಮತ್ತು ಕೆಲವು ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಬೆಂಕಿ ಹಚ್ಚಿದ್ದಾರೆ. ಬೆಲ್ಜಿಯಂ ಪೊಲೀಸರು ಒಂದು ಡಜನ್ ಗೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ, ಒಬ್ಬರನ್ನು ಬಂಧಿಸಿದ್ದಾರೆ.
ಬೆಲ್ಜಿಯಂ ರಾಜಧಾನಿಯಾದ್ಯಂತ ಹಲವಾರು ಸ್ಥಳಗಳಲ್ಲಿ ಗಲಭೆಗಳು ನಡೆದವು, ಅಲ್ಲಿ ಡಜನ್ ಗಟ್ಟಲೆ ಫುಟ್ಬಾಲ್ ಅಭಿಮಾನಿಗಳು, ಕೆಲವರು ಮೊರೊಕನ್ ಧ್ವಜಗಳನ್ನು ಧರಿಸಿದ್ದವರು ಸೇರಿದ್ದರು. ಪೊಲೀಸರು ಗಲಭೆ ತಡೆಯಲು ಜಲ ಫಿರಂಗಿ ಮತ್ತು ಅಶ್ರುವಾಯುಗಳನ್ನು ಬಳಸಿದರು.
‘ಸಂಜೆ 7 ಗಂಟೆಯ ಸುಮಾರಿಗೆ ಪರಿಸ್ಥಿತಿ ಸಹಜತೆಗೆ ಮರಳಿದೆ. ಸಂಬಂಧಪಟ್ಟ ವಲಯಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ’ ಎಂದು ಪೊಲೀಸ್ ವಕ್ತಾರ ಇಲ್ಸೆ ವ್ಯಾನ್ ಡಿ ಕೀರೆ ಹೇಳಿದರು.
Related Articles
ಇದನ್ನೂ ಓದಿ:ಭಾರತ್ ಜೋಡೋ ಯಾತ್ರೆ: ಕಾಲ್ತುಳಿತದಲ್ಲಿ ಬಿದ್ದು ಗಾಯಗೊಂಡ ಕಾಂಗ್ರೆಸ್ ಮುಖಂಡ ಕೆಸಿ ವೇಣುಗೋಪಾಲ್
“ಗಲಭೆಕೋರರು ಪೈರೋಟೆಕ್ನಿಕ್ ಮೆಟೀರಿಯಲ್ ಗಳು, ಸ್ಪೋಟಕಗಳು, ಸ್ಟಿಕ್ ಗಳನ್ನು ಬಳಸಿದರು ಮತ್ತು ಹೆದ್ದಾರಿಯಲ್ಲಿ ಬೆಂಕಿ ಹಚ್ಚಿದರು. ಅಲ್ಲದೆ, ಪಟಾಕಿಯಿಂದ ಪತ್ರಕರ್ತರೊಬ್ಬರ ಮುಖಕ್ಕೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫಿಫಾ 2022ರ ಪಂದ್ಯದಲ್ಲಿ ಬಲಿಷ್ಠ ತಂಡಗಳಲ್ಲಿ ಒಂದಾದ ಬೆಲ್ಜಿಯಂ ಮೇಲೆ ಸವಾರಿ ಮಾಡಿದ ಮೊರಾಕ್ಕೊ ತಂಡ 2-0 ಗೋಲುಗಳ ಐತಿಹಾಸಿಕ ಗೆಲುವು ದಾಖಲಿಸಿದೆ. ಇದು ಕಳೆದ 24 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಮೊರಾಕ್ಕೊ ಸಾಧಿಸಿದ ಮೊದಲ ಜಯವಾಗಿದೆ. ಈ ಗೆಲುವಿನೊಂದಿಗೆ ಮೊರಾಕ್ಕೊ “ಎಫ್’ ವಿಭಾಗದ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಿಯಾಯಿತು. ಬೆಲ್ಜಿಯಂ ತೃತೀಯ ಸ್ಥಾನಕ್ಕೆ ಕುಸಿಯಿತು.