Advertisement
ಟ್ವೀಟರ್ ನಲ್ಲಿ ರಿಹಾನಾ ತನ್ನ ಒಂದು ಟಾಪ್ ಲೆಸ್ ಪೋಟೋವನ್ನು ಹಂಚಿಕೊಂಡಿದ್ದು, ಆ ಫೋಟೋದಲ್ಲಿ ಅವರು ಶ್ರೀ ಗಣೇಶನ ಪೆಂಡೆಂಟ್ ಧರಿಸಿರುವುದ ಈಗ ವ್ಯಾಪಕ ಟೀಕೆಗೆ ಕಾರಣವಾಗಿದೆ.
Related Articles
Advertisement
” ಇದು ತುಂಬಾ ಆಫೆನ್ಸೀವ್ ಆಗಿದೆ, ಕೋಟ್ಯಾಂತರ ಜನರ ಧಾರ್ಮಿಕ ಭಾವನೆಗಳಿಗೆ ಇದು ಧಕ್ಕೆ ತಂದಿದೆ. ಪ್ರತಿವರ್ಷ ಗಣೇಶ್ ಚತುರ್ಥಿ ಹಬ್ಬದಂದು ಶ್ರೀ ಗಣೇಶನನ್ನು ಪೂಜಿಸುತ್ತಾರೆ, ನೀನು ನನಗೆ ನಿರಾಶೆಗೊಲಿಸಿರುವಿ” ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ರಿಹಾನಾ, ಈ ರೀತಿಯಾಗಿ ನಡೆದುಕೊಂಡಿರುವುದು ಇದೆ ಮೊದಲಲ್ಲ. ಇದಕ್ಕೂ ಮೊದಲು 2013 ರಲ್ಲಿ ಅಬು ಧಾಬಿಯ ಶೇಕ್ ಜಾಯದ್ ಗ್ರಾಂಡ್ ಮಾಸ್ಕ್ ಸೆಂಟರ್ ನಲ್ಲಿ ಫೋಟೋ ಶೂಟ್ ನಡೆಸಿದ್ದಳು. ಅಲ್ಲಿ ಕೆಲವು ಆಕ್ಷೇಪಾರ್ಹ ಭಾವಚಿತ್ರಗಳನ್ನು ಕ್ಲಿಕ್ಕಿಸಿದ ಕಾರಣ ಆಕೆಯನ್ನು ಅಲ್ಲಿಂದ ಹೊರಹೋಗಲು ಸೂಚಿಸಲಾಗಿತ್ತು.
ಇನ್ನು, ಫೆ. 12 ರಂದು ರಿಹಾನಾ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು. ರಾಷ್ಟ್ರೀಯ ಮಾಧ್ಯಮದ ಸುದ್ದಿಯೊಂದನ್ನು ಟ್ಯಾಗ್ ಮಾಡುವುದ ಮೂಲಕ ನಾವು ಈ ಬಗ್ಗೆ ಯಾಕೆ ಚರ್ಚೆ ಮಾಡುವುದಿಲ್ಲ..? ಎಂದು ಟ್ವೀಟ್ ಮಾಡಿದ್ದರು.
ಓದಿ : ಬೆಂಗಳೂರಿನ ದಿಶಾ ರವಿ ಬಂಧನ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ