Advertisement
ಬೆಳ್ತಂಗಡಿ ತಾಲೂಕು ಶ್ರೀ ಕಾಲ ಭೈರವೇಶ್ವರ ಒಕ್ಕಲಿಗ ಗೌಡರ ಸಂಘ ಹಾಗೂ ಕೆ.ಎಂ.ಸಿ. ಆಸ್ಪತ್ರೆ ಸಹಯೋಗದಲ್ಲಿ ಉಜಿರೆ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸೌಹಾರ್ದ ಸಹಕಾರಿ ಸಹಕಾರಿ ಸಂಘದ ವಠಾರದಲ್ಲಿ ರವಿವಾರ ಜರ ಗಿದ ರಕ್ತದಾನ ಶಿಬಿರವನ್ನು ಅವರು ಉದ್ಘಾಟಿಸಿ, ಸ್ವಜಾತಿ ಬಾಂಧವರು ಅನೇಕ ಸ್ತರಗಳಲ್ಲಿ ಉನ್ನತ ಹುದ್ದೆ ಅಲಂಕರಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಾ ಬಂದಿದ್ದಾರೆ. ಈ ನಿಟ್ಟಿನಲ್ಲಿ ಸಂಘದಿಂದ ಮತ್ತೂಂದು ಹೆಜ್ಜೆಯಾಗಿ ರಕ್ತದಾನ ಶಿಬಿರ ಹಮ್ಮಿಕೊಂಡು, ಸಮಾಜದ ಜನರ ಆರೋಗ್ಯ ಕಾಪಾಡುವಲ್ಲಿನ ಕಾಳಜಿ ಶ್ಲಾಘನೀಯ ಎಂದರು.
Related Articles
Advertisement
ಜಿ.ಪಂ. ಸದಸ್ಯೆ ಸೌಮ್ಯಲತಾ ಜಯಂತ ಗೌಡ, ಶ್ರೀ ಕಾಲಭೈರವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಂಜನ್ ಜಿ. ಗೌಡ, ಶ್ರೀ ಕಾಲಭೆೈರವೇಶ್ವರ ಒಕ್ಕಲಿಗ ಗೌಡ ಸಂಘದ ಕಾರ್ಯಾಧ್ಯಕ್ಷ ತುಂಗಪ್ಪ ಗೌಡ ಮರಕ್ಕಡ, ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಗೌಡ ಇಚ್ಚಿಲ, ಉದ್ಯಮಿ ಶಿವಕಾಂತ ಗೌಡ, ಬೆಳ್ತಂಗಡಿ ಎ.ಪಿ.ಎಂ.ಸಿ. ಅಧ್ಯಕ್ಷ ಕೇಶವ ಗೌಡ, ಸಂಘದ ಉಪಾಧ್ಯಕ್ಷ ಸುಂದರ ಗೌಡ ಪುಡ್ಕೆತ್ತು, ಯುವ ಒಕ್ಕಲಿಗರ ಸಂಘ ರಾಜ್ಯ ಕಾರ್ಯದರ್ಶಿ ದೇವಿಪ್ರಸಾದ್ ಬೊಳ್ಮ ಮತ್ತಿತರರಿದ್ದರು.
ಬಾಲಕೃಷ್ಣ ಗೌಡ ಕಲ್ಲಾಜೆ ಸ್ವಾಗತಿಸಿ, ದಿನೇಶ್ ಗೌಡ ಕಲ್ಲಾಜೆ ವಂದಿಸಿದರು. ಅನಿಲ್ ಗೌಡ ಅಂತರ ನಿರೂಪಿಸಿದರು.