Advertisement

ರಸಗೊಬ್ಬರ ಅಂಗಡಿಗಳ ಮೇಲೆ ದಾಳಿ

04:26 PM Aug 29, 2020 | Suhan S |

ಕೊರಟಗೆರೆ: ಖಾಸಗಿ ರಸಗೊಬ್ಬರದ ಅಂಗಡಿಯಲ್ಲಿ ಸಣ್ಣಹರಳಿನ ಯೂರಿಯಾ ಖರೀದಿಸುವ ಗ್ರಾಮೀಣ ಪ್ರದೇಶದ ರೈತರಿಂದ ಅತಿ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಕೃಷಿ ಅಧಿಕಾರಿಗಳ ತಂಡ ದಿಢೀರ್‌ ದಾಳಿ ನಡೆಸಿ 4 ಅಂಗಡಿ ಮಾಲೀಕರಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿ ಅಂಗಡಿ ಪರವಾನಗಿ ರದ್ದುಪಡಿಸುವ ಎಚ್ಚರಿಕೆ ನೀಡಿದರು.

Advertisement

ತಾಲೂಕಿನ ಹೊಳವನಹಳ್ಳಿ, ಕೋಳಾಲ, ಚನ್ನರಾಯನ ದುರ್ಗ ಮತ್ತು ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಖಾಸಗಿ ರಸಗೊಬ್ಬರ ಅಂಗಡಿಯಲ್ಲಿ ರಸಗೊಬ್ಬರ ಬೆಲೆಯ ನಾಮಫ‌ಲಕ, ರೈತರು ಖರೀದಿಸುವ ರಸೀದಿ ಮತ್ತು ನಿಗದಿತ ಬೆಲೆಗಿಂತ ಹೆಚ್ಚಿನ ಹಣ ರೈತರಿಂದ ವಸೂಲಿ ಮಾಡುತ್ತೀದ್ದಾರೆ ಎಂದು ರೈತಾಪಿವರ್ಗ ಕೃಷಿ ಇಲಾಖೆಗೆ ದೂರು ನೀಡಿದ ತಕ್ಷಣ ಎಚ್ಚೆತ್ತ ಅಧಿಕಾರಿಗಳ ತಂಡ ದಿಢೀರ್‌ ದಾಳಿ ನಡೆಸಿ ಅಂಗಡಿಯ ದಾಸ್ತಾನು ಮತ್ತು ಮಾರಾಟ ಪರಿಶೀಲನೆ ನಡೆಸಿದ್ದಾರೆ.

ಹೊಳವನಹಳ್ಳಿಯ ಮಂಜುನಾಥ ಟ್ರೇಡರ್‌, ಮಾವತ್ತೂರಿನ ಶಿವಗಂಗಾ ಮತ್ತು ತೋವಿನಕೆರೆಯ ಖಾಸಗಿ ಅಂಗಡಿಗಳಿಗೆ ರಸಗೊಬ್ಬರ ನಿಗದಿತ ಬೆಲೆ, ಹೆಚ್ಚಿನ ಬೆಲೆಗೆ ಮಾರಾಟ ಮತ್ತು ರಸಗೊಬ್ಬರ ಖರೀದಿಸುವ ರಸೀದಿಸುವ ರಸೀದಿ ನೀಡುವ ವಿಚಾರದಲ್ಲಿ ನಾಲ್ಕುಖಾಸಗಿ ರಸಗೊಬ್ಬರದ ಅಂಗಡಿಯ ಮಾಲೀಕರಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿ ಮತ್ತೇ ಗ್ರಾಮೀಣ ಪ್ರದೇಶದ ರೈತರಿಗೆ ತೊಂದರೆ ಆದರೇ ಅಂಗಡಿಯ ಪರವಾನಗಿ ರದ್ದುಪಡಿಸುವ ಎಚ್ಚರಿಕೆ ನೀಡಿದ್ದಾರೆ.

ಮಧುಗಿರಿಯ ಕೃಷಿ ಉಪನಿರ್ದೇಶಕ ಅಶೋಕ್‌ ಮತ್ತು ಕೊರಟಗೆರೆ ಸಹಾಯಕ ಕೃಷಿ ನಿರ್ದೇಶಕ ನಾಗರಾಜು ನೇತೃತ್ವದ ಅಧಿಕಾರಿಗಳ ತಂಡ ಖಾಸಗಿ ಅಂಗಡಿಗಳಿಗೆ ದಿಢೀರ್‌ ದಾಳಿ ನಡೆಸಿ ರಸಗೊಬ್ಬರದ ಅಂಗಡಿ ಮಾಲೀಕರಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ರಸಗೊಬ್ಬರ ದಾಸ್ತಾನು ಇದ್ದರೂ ಖಾಲಿಯಾಗಿದೆ ಅಂಗಡಿಯಲ್ಲಿ ನಿಗದಿತ ಬೆಲೆಗಿಂತ ಹೆಚ್ಚಿನ ಹಣವನ್ನು ರೈತರಿಂದ ಪಡೆದರೇ ಮುಲಾಜಿಲ್ಲದೇ ಅಂಗಡಿಯ ಪರವಾನಗಿ ರದ್ದುಪಡಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಸೂಚಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next