ಭೋಪಾಲ್: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಶ್ರೀಸಾಮಾನ್ಯರಿಗೆ ಹೊಡೆತ ನೀಡಿರುವ ಬೆನ್ನಲ್ಲೇ ಮಧ್ಯಪ್ರದೇಶದ ಬಿಜೆಪಿ ಸಚಿವರೊಬ್ಬರು “ಸೈಕಲ್ ತುಳಿಯಿರಿ’ ಎಂದಿದ್ದಾರೆ.
ಈ ಮೂಲಕ, ಇಂಧನ ಸಚಿವ ಪ್ರಧುಮಾನ್ ಸಿಂಗ್ ಪರಿಣಾಮಕಾರಿಯಾಗಿ ವೆಚ್ಚ ಕಡಿತ ಮಾಡುವ ಕುರಿತು ಉಪಾಯ ಹೇಳಿಕೊಟ್ಟಿದ್ದಾರೆ.
ಭೋಪಾಲ್‌ನಲ್ಲಿ ಲೀ. ಪೆಟ್ರೋಲ್ ಬೆಲೆ 107 ರೂ.ಗೆ ಮುಟ್ಟಿರುವ ಹಿನ್ನೆಲೆಯಲ್ಲಿ ಅವರು, “ಮಾರುಕಟ್ಟೆಗೆ ಸೈಕಲ್ ತೆಗೆದುಕೊಂಡು ಹೋಗಿ. ಆರೋಗ್ಯ ಕಾಪಾಡಿ, ಮಾಲಿನ್ಯ ತಡೆಗಟ್ಟಲು ಮುಂದಾಗಿ’ ಎಂದು ಸಲಹೆ ನೀಡಿದ್ದಾರೆ.
ಅಲ್ಲದೇ, ಬೆಲೆ ಹೆಚ್ಚಳದಿಂದ ಬರುವ ಹಣವನ್ನು ಆರೋಗ್ಯ ಕಾರ್ಯಕ್ರಮಗಳು, ಬಡವರ ಯೋಜನೆಗಳಿಗೆ ಬಳಸಲಾಗುತ್ತಿದೆ ಎಂದೂ ಹೇಳಿದ್ದಾರೆ.
ಇದನ್ನೂ ಓದಿ :ಕೋವಿಡ್ ಪ್ರಕರಣ ಇಳಿಮುಖ : ಜೂ.30ರಿಂದ ಬಂಡೀಪುರ ಸಫಾರಿ ಪುನಾರಂಭ