ಪರ್ತ್: ಆಸ್ಟ್ರೇಲಿಯಾದ ಮಾಜಿ ನಾಯಕ, ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಾಂಟಿಂಗ್ ಅವರು ಶುಕ್ರವಾರದಂದು ಆಸ್ಟ್ರೇಲಿಯ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದಕ್ಕಾಗಿ ಕಾಮೆಂಟರಿಯಲ್ಲಿ ತೊಡಗಿದ್ದರು.
ಇದನ್ನೂ ಓದಿ;ಅಮೆರಿಕನ್ ಗಾಲ್ಫ್ ಆಟಗಾರ್ತಿ ಕ್ರಿಸ್ಟಿಯಾನೋ ರೀತಿಯಲ್ಲೇ ಟಾಪ್ ತೆಗೆದು ಸಂಭ್ರಮಾಚರಣೆ: ವೀಡಿಯೋ ವೈರಲ್ !
ಪಾಂಟಿಂಗ್ಗೆ ಹೃದಯಾಘಾತವಿತ್ತು ಎಂದು ಹೇಳಲಾಗುತ್ತದೆ, ಆದರೆ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಇದುವರೆಗೆ ಬಿಡುಗಡೆಯಾಗಿಲ್ಲ.
Related Articles
47 ವರ್ಷದ ಅವರನ್ನು ಮಧ್ಯಾಹ್ನ ಕ್ರೀಡಾಂಗಣದಿಂದ ಆಸ್ಪತ್ರೆಗೆ ಸೇರಿಸಲಾಯಿತು ಎಂದು ವರದಿಯಾಗಿದೆ.
ಆಸ್ಟ್ರೇಲಿಯಾದ ಅತ್ಯಂತ ಯಶಸ್ವಿ ಕ್ಯಾಪ್ಟನ್ ಗಳಲ್ಲಿ ಒಬ್ಬರಾದ ರಿಕಿ ಪಾಂಟಿಂಗ್ 2012ರಲ್ಲಿ ಕ್ರಿಕೆಟ್ ನಿಂದ ದೂರವಾಗಿದ್ದರು. ಅದರ ಬಳಿಕ ಅವರು ಕ್ರಿಕೆಟ್ ಕೋಚಿಂಗ್, ಕಾಮೆಂಟರಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.