Advertisement

Valencia ಗ್ರಂಥಾಲಯ ಪ್ರವೇಶ ದ್ವಾರದ ಮುಂಭಾಗದ ರಿಕ್ಷಾ ಪಾರ್ಕಿಂಗ್‌ ಶೆಲ್ಟರ್‌

03:41 PM Sep 26, 2024 | Team Udayavani |

ವೆಲೆನ್ಸಿಯಾ: ಇಲ್ಲಿನ ಜಂಕ್ಷನ್‌ ಬಳಿಯ ಉದ್ಯಾನವನ ಹಾಗೂ ನಗರ ಕೇಂದ್ರ ಗ್ರಂಥಾಲಯದ ವೆಲೆನ್ಸಿಯಾ ಶಾಖೆ ಮುಂಭಾಗದಲ್ಲಿ ಪ್ರವೇಶ ದ್ವಾರದ ಬಳಿ ರಿಕ್ಷಾ ನಿಲುಗಡೆಗೆ ಶೆಡ್‌ ನಿರ್ಮಿಸಲಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.

Advertisement

ಫುಟ್‌ಪಾತ್‌ಗೆ ತಾಗಿಕೊಂಡು ಶೆಡ್‌ ಅಳವಡಿಕೆ ಕಾರ್ಯ ಮಾಡಲಾಗುತ್ತಿದೆ. ಗ್ರಂಥಾಲಯದ ಮುಂಭಾಗದಲ್ಲೇ ರಿಕ್ಷಾಗಳು ನಿಲ್ಲುವ ಕಾರಣ ಹಿರಿಯ ನಾಗರಿಕರು, ಗ್ರಂಥಾಲಯ, ಪಾರ್ಕ್‌ಗೆ ತೆರಳುವ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತದೆ ಎನ್ನಲಾಗಿದೆ. ಈಗಾಗಲೇ ಶಾಶ್ವತ ಶೆಡ್‌ ಅಳವಡಿಕೆ ಕಾರ್ಯ ಆರಂಭಗೊಂಡಿದೆ. ಆದರೆ ಇದು ಪಾಲಿಕೆಯಿಂದ ಪೂರ್ವಾ ನುಮತಿ ಪಡೆಯದೆ ಕಾಮಗಾರಿ ನಡೆಸಲಾ ಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಪಾಲಿಕೆ ಅಧಿಕಾರಿಗಳಿಗೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ.

ಪಾರ್ಕ್‌ ಹಾಗೂ ಗ್ರಂಥಾಲಯ ಅನೇಕ ವರ್ಷದಿಂದ ಕಾರ್ಯಾಚರಿಸುತ್ತಿದ್ದು, ಇದೀಗ ಸಾರ್ವಜನಿಕರಿಗೆ ತೊಂದರೆಯಾಗು ವಂತೆ ಶೆಲ್ಟರ್‌ ನಿರ್ಮಿಸುವುದು ಸರಿಯಲ್ಲ. ರಾತ್ರಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಸ್ಥಳೀಯ ಪಾಲಿಕೆ ಸದಸ್ಯೆ ಮಾಹಿತಿ ನೀಡಿದ್ದಾರೆ.

ವಾಹನ ಪಾರ್ಕಿಂಗ್‌ಗೆ ಸಮಸ್ಯೆ
ಗ್ರಂಥಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಿದ್ದು ಅವರ ವಾಹನಗಳ ಪಾರ್ಕಿಂಗ್‌ಗೆ ಜಾಗವಿಲ್ಲ. ಈ ಹಿಂದೆ ಗ್ರಂಥಾಲಯದ ಮುಂಭಾಗದ ರಸ್ತೆ ಬದಿಯಲ್ಲಿ ಪಾರ್ಕಿಂಗ್‌ ಮಾಡುತ್ತಿದ್ದರು. ಆದರೆ ರಿಕ್ಷಾ ನಿಲ್ದಾಣ ವಿಸ್ತರಣೆಯಾಗಿರುವ ಕಾರಣ ಸಾರ್ವಜನಿಕರಿಗೆ ಪಾರ್ಕಿಂಗ್‌ಗೆ ಜಾಗ ಇಲ್ಲದಂತಾಗಿದೆ. ಮತ್ತೂಂದೆಡೆ ಪಾದಚಾರಿಗಳಿಗೂ ಸಮಸ್ಯೆಯಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.

ಗೇಟ್‌ ಮುಂಭಾಗ ರಿಕ್ಷಾ ನಿಲ್ಲಿಸದಿರಿ
ದ್ವಿಚಕ್ರ ವಾಹನದಲ್ಲಿ ಹಾಗೂ ನಡೆದುಕೊಂಡು ಬರುವ ಸಾರ್ವಜನಿಕರಿಗೆ ಗ್ರಂಥಾಲಯಕ್ಕೆ ತೆರಳಲು ಅನುಕೂಲವಾಗುವಂತೆ ಪ್ರವೇಶ ದ್ವಾರದ ಮುಂಭಾಗದಲ್ಲಿ ಆಟೋಗಳನ್ನು ನಿಲ್ಲಿಸಬಾರದು. ಇದಕ್ಕೆ ಆಟೋ ಚಾಲಕರ ಸಂಘ ಸಹಕರಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗುವಂತೆ ಶೆಲ್ಟರ್‌ ನಿರ್ಮಿಸುವುದು ಸರಿಯಲ್ಲ. ಪಾರ್ಕ್‌, ಗ್ರಂಥಾಲಯಕ್ಕೆ ತೆರಳುವವರಿಗೆ ಅನು ಕೂಲವಾಗುವಂತೆ ಅವಕಾಶ ನೀಡಬೇಕು.
-ವಿಶ್ವನಾಥ್‌, ಸ್ಥಳೀಯರು

Advertisement

ಅನುಮತಿ ನೀಡಿಲ್ಲ
ವೆಲೆನ್ಶಿಯಾ ಬಳಿ ರಿಕ್ಷಾ ನಿಲ್ದಾಣ ನಿರ್ಮಾಣಕ್ಕೆ ಪಾಲಿಕೆಯಿಂದ ಯಾವುದೇ ಅನುಮತಿ ನೀಡಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸಾರ್ವಜನಿಕರಿಗೆ ತೊಂದರೆಯಾಗುವ ಅಕ್ರಮ ಕಾಮಗಾರಿಯಾದರೆ ಕ್ರಮ ಕೈಗೊಳ್ಳಲಾಗುವುದು.
-ಆನಂದ್‌ ಸಿ.ಎಲ್‌.,ಮನಪಾ ಆಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next