Advertisement

ಚೂರಿಯಿಂದ ಇರಿದು ರಿಕ್ಷಾ ಚಾಲಕನ ಕೊಲೆ

03:45 AM Jan 30, 2017 | Team Udayavani |

ಉಡುಪಿ: ಕ್ಷುಲ್ಲಕ ಕಾರಣಕ್ಕೆ ರಿಕ್ಷಾ ಚಾಲಕರೋರ್ವರನ್ನು  ಅಪರಿಚಿತನೋರ್ವ ಚೂರಿಧಿಯಿಂದ ನಡು ರಸ್ತೆಯಲ್ಲೇ ಇರಿದು ಕೊಲೆ ಮಾಡಿದ ಘಟನೆ  ಕರಾವಳಿ ಬೈಪಾಸ್‌ ಬಳಿ ಶನಿವಾರ ತಡರಾತ್ರಿ ಸುಮಾರು 12.10ರ ವೇಳೆ ನಡೆದಿದೆ. ನಿಟ್ಟೂರಿನ ನಿವಾಸಿ ರಿಕ್ಷಾ ಚಾಲಕ ಹನೀಫ್ (55) ಕೊಲೆಗೀಡಾದ ವ್ಯಕ್ತಿ.. ಮತ್ತೋರ್ವ ರಿಕ್ಷಾ ಚಾಲಕ ಗಂಭೀರ ಗಾಯಗೊಂಡಿದ್ದು ಅವರನ್ನು  ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಹನೀಫ್ ಅವರು ತಡರಾತ್ರಿ ತನ್ನ ಆಟೋ ರಿಕ್ಷಾದಲ್ಲಿ  ಕೊಡಂಕೂರಿನ ಮೊದಲ ಪತ್ನಿ ಮನೆಗೆ ತೆರಳುವ ದಾರಿಮಧ್ಯೆ ಮೂಡನಿಡಂಬೂರಿನ ಇಂಟರ್‌ ನ್ಯಾಷನಲ್‌ ಹೊಟೇಲ್‌ ಬಳಿಯ ಡಿವೈಡರ್‌ ಬಳಿ ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೋರ್ವ ತುಳುವಿನಲ್ಲಿ ಯಾಕೆ ರಾಂಗ್‌ ಸೈಡ್‌ನ‌ಲ್ಲಿ ಬರುತ್ತಿದ್ದೀಯಾ ಎಂದು ಪ್ರಶ್ನಿಸಿದರು.

ಈ ವೇಳೆ ಅದೇ ದಾರಿಯಲ್ಲಿ ತನ್ನ ರಿಕ್ಷಾದಲ್ಲಿ ಬರುತ್ತಿದ್ದ ಮಹಮ್ಮದ್‌ ಶಬ್ಬೀರ್‌ ಅವರು ತನ್ನ ಬಾವ ಹನೀಫ್ ಅವರ ಆಟೋ ರಿಕ್ಷಾ ಡಿವೈಡರ್‌ ಬಳಿ ನಿಂತಿರುವುದನ್ನು ಗಮ ನಿಸಿ ಯಾಕೆ ಗಲಾಟೆ ಮಾಡುತ್ತಿ ದ್ದೀರಿ ಎಂದು ಬಂದು ವಿಚಾರಿಸಿದರು.  ಆಗ ಕೆರಳಿದ ಅಪರಿಚಿತ ವ್ಯಕ್ತಿ ಶಬ್ಬೀರ್‌ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಲ್ಲಿದ್ದ  ಚಾಕುವಿನಿಂದ ಎದೆಗೆ, ಕಂಕುಳಿಗೆ, ಹೊಟ್ಟೆಯ ಎಡತೋಳಿಗೆ ಇರಿದಾಗ ತಡೆಯಲು ಬಂದ ಹನೀಫ್ ಅವರ ಮೇಲೂ ಎದೆಗೆ ಇರಿದ.ಈ ವೇಳೆ ಗಂಭೀರ ಗಾಯಗೊಂಡ ಇಬ್ಬರು ಜೋರಾಗಿ ಬೊಬ್ಬೆ ಹಾಕಿದರು.  ಅದನ್ನು ಕಂಡ ಅಪರಿಚಿತ ಬೈಕ್‌ನಲ್ಲಿ  ಪರಾರಿಯಾದ. 

ಗಾಯಗೊಂಡ ಇಬ್ಬರನ್ನು ಅದೇ ದಾರಿಯಲ್ಲಿ  ಬರುತ್ತಿದ್ದ ರಿಕ್ಷಾ ಚಾಲಕ ಸತೀಶ್‌ ಅವರು ಉಡುಪಿಯ ಆದರ್ಶ ಆಸ್ಪತ್ರೆಗೆ ಸೇರಿಸಿದ್ದು, ಗಂಭೀರ ಗಾಯಗೊಂಡಿದ್ದ ಹನೀಫ್ ಅವರು ಆ ವೇಳೆಗಾಗಲೇ ಮೃತಪಟ್ಟಿದ್ದರು. ಶಬ್ಬೀರ್‌ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಇಬ್ಬರು ಪತ್ನಿಯರು
ಮೃತಪಟ್ಟ ರಿಕ್ಷಾ ಚಾಲಕ ಹನೀಫ್ ಅವರಿಗೆ ಇಬ್ಬರು ಪತ್ನಿಯರಿದ್ದಾರೆ. ಮೊದಲ ಪತ್ನಿ ಮನೆಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮೊದಲ ಪತ್ನಿಗೆ ಮಕ್ಕಳಿಲ್ಲ. ಎರಡನೇ ಪತ್ನಿಗೆ  ಇಧಿಬ್ಬರು ಪುತ್ರರು  ಹಾಗೂ ಪುತ್ರಿಧಿಯಿದ್ದಾರೆ.  ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next