Advertisement

Shirva: ರಿಕ್ಷಾ-ಕಾರು ಢಿಕ್ಕಿ; ವೃದ್ಧ ಮಹಿಳೆ ಸಾವು

08:44 PM Jun 13, 2024 | Team Udayavani |

ಶಿರ್ವ: ಬೆಳ್ಳೆ ಗ್ರಾಮದ ಪಾಜಕ ಕ್ಷೇತ್ರದ ದ್ವಾರದ ಬಳಿ ಆಟೋ ರಿಕ್ಷಾ ಮತ್ತು ಕಾರು ಮುಖಾಮುಖೀ ಢಿಕ್ಕಿಯಾಗಿ ರಿಕ್ಷಾದಿಂದ ಹೊರಕ್ಕೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ವೃದ್ಧ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಜೂ. 12 ರಂದು ನಡೆದಿದೆ.

Advertisement

ರಿಕ್ಷಾದಲ್ಲಿದ್ದ ಬೆಳ್ಳೆ ಗ್ರಾ.ಪಂ. ಮಾಜಿ ಸದಸ್ಯೆ ಪಡುಬೆಳ್ಳೆಯ ಆಗ್ನೇಸ್‌ ನೊರೊನ್ಹಾ (76) ಮೃತಪಟ್ಟ ವರು.ಜೆಸಿಂತಾ ಮೆನೇಜಸ್‌ (51)ಗಾಯಗೊಂಡವರು. ಸುಭಾಸ್‌ನಗರದಿಂದ ಪಡುಬೆಳ್ಳೆ ಗೆ ಬರುತ್ತಿದ್ದ ಕಾರು ಓವರ್‌ಟೇಕ್‌ ಮಾಡುವ ಭರದಲ್ಲಿ ಪಡುಬೆಳ್ಳೆಯಿಂದ ಸುಭಾಸ್‌ನಗರಕ್ಕೆ ಹೋಗುತ್ತಿದ್ದ ರಿಕ್ಷಾಕ್ಕೆ  ಪಾಜಕ ಕ್ಷೇತ್ರದ ದ್ವಾರದ ಬಳಿ ಮುಖಾಮುಖೀಯಾಗಿ ಢಿಕ್ಕಿ ಹೊಡೆದಿದೆ.ಢಿಕ್ಕಿಯ ರಭಸಕ್ಕೆ  ರಿಕ್ಷಾದಿಂದ ಹೊರಕ್ಕೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಆಗ್ನೇಸ್‌ ಮತ್ತು ಜೆಸಿಂತಾ ಅವರನ್ನು ಸುಧಾಕರ ಮತ್ತು ಸಾರ್ವಜನಿಕರು ಸೇರಿಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಪರೀಕ್ಷಿಸಿದ ವೈದ್ಯಾಧಿಕಾರಿಯವರು ಇಬ್ಬರನ್ನೂ ಒಳರೋಗಿಯಾಗಿ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದ್ದರು.ತೀವ್ರ ಗಾಯಗೊಂಡಿದ್ದ ಆಗ್ನೇಸ್‌ ಅವರು ಚಿಕಿತ್ಸೆ ಫಲಕಾರಿಯಾಗದೆ ಸಂಜೆ ಮೃತಪಟ್ಟಿದ್ದಾರೆ. ರಿಕ್ಷಾ ಚಾಲಕ ಸುರೇಶ್‌ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿದ್ದ ಕಾರಿನ ಚಾಲಕ ಮತ್ತು ಪ್ರಯಾಣಿಕ ಉಡುಪಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತಗೊಂಡಿದ್ದ ಎರಡೂ ವಾಹನಗಳು ಜಖಂಗೊಂಡಿವೆ. ಶಿರ್ವಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next