Advertisement

ಸಮಾಜ ಸೇವೆಗೆ ಹೃದಯ ಶ್ರೀಮಂತಿಕೆ ಪೂರಕ: ಮಾಜಿ ಸಚಿವ ಜಯಪ್ರಕಾಶ್‌ ಹೆಗ್ಡೆ

11:34 PM Dec 08, 2024 | Team Udayavani |

ತೆಕ್ಕಟ್ಟೆ: ಕೊರ್ಗಿ ವಿಠಲ ಶೆಟ್ಟರಿಗೆ ಅರ್ಹತೆ ಇದ್ದು, ಜತೆಗೆ ಪ್ರೋತ್ಸಾಹವೂ ಜತೆಯಾಗಿದೆ. ಯಾವುದೇ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಿದರೆ ಮಾತ್ರ ಅದು ಸದುಪಯೋಗವಾಗುತ್ತದೆ.

Advertisement

ಸಹಾಯ ಮಾಡಿದ ವ್ಯಕ್ತಿ ನನ್ನನ್ನು ಸ್ಮರಿಸಬೇಕು ಎನ್ನುವ ನಿರೀಕ್ಷೆಯನ್ನು ಯಾರೂ ಇಟ್ಟುಕೊಳ್ಳಬಾರದು. ವಿಠಲ ಶೆಟ್ಟರ ಹೃದಯ ಶ್ರೀಮಂತಿಕೆಯೇ ಅವರ ಸಮಾಜ ಸೇವೆಗೆ ಸಹಕಾರಿಯಾಗಿದೆ ಎಂದು ಮಾಜಿ ಸಚಿವ ಕೆ. ಜಯಪ್ರಕಾಶ್‌ ಹೆಗ್ಡೆ ಹೇಳಿದರು.

ಅವರು ಡಿ.8ರಂದು ಆನೆಗುಡ್ಡೆಯ ಶ್ರೀ ವಿನಾಯಕ ಸಭಾಗೃಹದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ, ಪರಿಸರವಾದಿ ಕೊರ್ಗಿ ವಿಠಲ ಶೆಟ್ಟಿ ಅವರ ನಾಗರಿಕ ಸಮ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ವಿಠಲ ಶೆಟ್ಟಿ ಹಾಗೂ ಭವಾನಿ ವಿ.ಶೆಟ್ಟಿ ದಂಪತಿಗಳನ್ನು ಹಿರಿಯ ಧಾರ್ಮಿಕ ಮುಖಂಡ ಬಿ. ಅಪ್ಪಣ್ಣ ಹೆಗ್ಡೆ ಬಸ್ರೂರು ಅವರು ಸಮ್ಮಾನಿಸಿದರು.ಕೊರ್ಗಿ ವಿಠಲ ಶೆಟ್ಟಿ ಅಭಿನಂದನ ಸಮಿತಿ ಅಧ್ಯಕ್ಷ ಕೆ.ಕೃಷ್ಣಪ್ರಸಾದ್‌ ಅಡ್ಯಂತಾಯ ಅಧ್ಯಕ್ಷತೆ ವಹಿಸಿದ್ದರು.

ಕೊರ್ಗಿ ವಿಠಲ ಶೆಟ್ಟಿ ಅಭಿನಂದನಾ ಸಮಿತಿ ಗೌರವ ಅಧ್ಯಕ್ಷ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ, ಶೃಂಗೇರಿ ಶಾರದಾಪೀಠದ ಪ್ರಾಂತೀಯ ಧರ್ಮಾಧಿಕಾರಿ ವೇ| ಬಿ. ಲೋಕೇಶ ಅಡಿಗ ಅವರು ಶುಭಾಶಂಸನೆಗೈದರು.

Advertisement

ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇಗುಲದ ಆನುವಂಶಿಕ ಆಡಳಿತ ಮೊಕ್ತೇಸರ ಧನಂಜಯ ಶೆಟ್ಟಿ ಬಿ., ಉದ್ಯಮಿ ಎಂ. ದಿನೇಶ್‌ ಹೆಗ್ಡೆ ಮೊಳಹಳ್ಳಿ , ಅಂಪಾರು ನಿತ್ಯಾನಂದ ಶೆಟ್ಟಿ , ಉದ್ಯಮಿ ಕಿರಣ್‌ ಶೆಟ್ಟಿ ಕೆ. ಬೆಂಗಳೂರು, ಚರ್ಮರೋಗ ತಜ್ಞ ಡಾ| ಅರುಣ್‌ ಶೆಟ್ಟಿ ಕೆ., ವೀಣಾ ಶೆಟ್ಟಿ, ಕೊರ್ಗಿ ವಿಠಲ ಶೆಟ್ಟಿ ಅಭಿನಂದನ ಸಮಿತಿ ಖಜಾಂಚಿ ಅರುಣ್‌ ಕುಮಾರ್‌ ಶೆಟ್ಟಿ ಹಾಗೂ ಕೊರ್ಗಿ ವಿಠಲ ಶೆಟ್ಟಿ ಅಭಿನಂದನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಅಭಿನಂದನಾ ಸಮಿತಿ ಉಪಾಧ್ಯಕ್ಷ ಮುಖ್ಯಶಿಕ್ಷಕ ಜಪ್ತಿ ಬಾಬು ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಕೆ.ರವಿರಾಜ್‌ ಉಪಾಧ್ಯಾಯ ಪ್ರಸ್ತಾವಿಸಿದರು.

ನಿಮಿತಾ ಶೆಟ್ಟಿ ಪ್ರಾರ್ಥಿಸಿದರು. ಸುಧೀರ್‌ ಶೆಟ್ಟಿ ಮಲ್ಯಾಡಿ ಸಮ್ಮಾನಿತರ ಪತ್ರ ವಾಚಿಸಿದರು. ರಂಜಿತ್‌ ಕುಮಾರ್‌ ಶೆಟ್ಟಿ ವಕ್ವಾಡಿ ನಿರೂಪಿಸಿ, ಪ್ರಚಾರ ಸಮಿತಿಯ ಸುಧಾಕರ ಶೆಟ್ಟಿ ತೆಕ್ಕಟ್ಟೆ ಸಂಘಟಿಸಿ, ರಾಜಗೋಪಾಲ ಪುರಾಣಿಕ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next