Advertisement
ಈ ಬಗ್ಗೆ ಅನುಮತಿಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದು, ಸರಕಾರದಿಂದಲೂ ಪೂರಕ ಸ್ಪಂದನೆ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ. ಆದ್ದರಿಂದ ಜಿಲ್ಲೆಯಲ್ಲಿ ಈ ಹಿಂದೆ ಮಕ್ಕಳಿಗೆ ನೀಡುತ್ತಿದ್ದಂತೆ ಮುಂದಿನ ತಿಂಗಳಿಂದಲೇ ಉಪ್ಪಿಟ್ಟು – ಸಿಹಿ ಪೊಂಗಲ್ ಬದಲಿಗೆ ಅನ್ನ ಸಾಂಬಾರು ನೀಡಲಾಗುವುದು ಎಂದು ಇಲಾಖೆಯ ಅಧಿಕಾರಿ ಗಳು ತಿಳಿಸಿದ್ದಾರೆ. ಅಕ್ಕಿ, ಬೇಳೆ ಮತ್ತು ದಿನಸಿ ಸಾಮಗ್ರಿಗಳನ್ನು ಪೂರೈಸುವಂತೆಯೂ ಸರಕಾರಕ್ಕೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಹೊಸ ಮೆನು ಬಂದಿತ್ತಾದರೂ ಉಡುಪಿ ಜಿಲ್ಲೆಯಲ್ಲಿ ಅಕ್ಕಿ ದಾಸ್ತಾನು ಇದ್ದ ಕಾರಣ ಮಕ್ಕಳಿಗೆ ಈವರೆಗೂ ನ್ನ – ಸಾಂಬಾರನ್ನೇ ನೀಡಲಾಗುತ್ತಿತ್ತು. ಅಕ್ಕಿ ಪೂರೈಕೆಯಲ್ಲಿ ಯಾವುದೇ ಕೊರತೆ ಆಗಿರಲಿಲ್ಲ. ಈಗ ಮತ್ತೆ ಅಕ್ಕಿ ಪೂರೈಕೆಯಾಗಿದೆ. ಆದ ಕಾರಣ ಜಿಲ್ಲೆಯ ಅಂಗನವಾಡಿ ಮಕ್ಕಳಿಗೆ ನೀಡುವ ಆಹಾರದಲ್ಲಿ ಯಾವುದೇ ವ್ಯತ್ಯಾಸ ಆಗಿರಲಿಲ್ಲ ಎಂದು ಉಡುಪಿ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಶ್ಯಾಮಲಾ ತಿಳಿಸಿದ್ದಾರೆ.
Related Articles
ಹೊಸ ಮೆನುವಿನಂತೆ ತಯಾರಿಸಿ ನೀಡುವ ಆಹಾರವನ್ನು ಕರಾವಳಿಯ ಮಕ್ಕಳಿಗೆ ಒಗ್ಗದಿರುವ ಬಗ್ಗೆ ಉದಯವಾಣಿಯು ಮಾ. 22ರಂದು “ಅಂಗನವಾಡಿ ಆಹಾರದ ಹೊಸ ಮೆನುವಿನಲ್ಲಿ ಅನ್ನ ನಾಪತ್ತೆ; ಒಗ್ಗದ ಹೊಸ ಆಹಾರ: ಕಿಚಡಿಗೆ ಮುಖ ಕಿವುಚುವ ಪುಟಾಣಿಗಳು’ ತಲೆಬರಹದಲ್ಲಿ ಮಾ. 22ರಂದು ವರದಿ ಪ್ರಕಟಿಸಿ ಗಮನ ಸೆಳೆದಿತ್ತು.
Advertisement