ಪಣಜಿ: ಕರ್ನಾಟಕ ರಾಜ್ಯವು ಈಗಾಗಲೇ ಗೋವಾದಿಂದ ಮಹದಾಯಿ ನೀರನ್ನು ತನ್ನತ್ತ ಹರಿಸಿಕೊಂಡಿದೆ. ಈಗ ಗೋವಾದ ಬಡವರಿಗೆ ಸಿಗುತ್ತಿರುವ ಅಕ್ಕಿಯನ್ನು ಸಹ ಕರ್ನಾಟಕದ ವ್ಯಾಪಾರಿಗಳು ತಿರುಗಿಸಿದ್ದಾರೆ. ಇದೇನು ನಿಮ್ಮ ಹೊಸ ಯೋಜನೆಯೇ..? ಎಂದು ಗೋವಾ ಫಾರ್ವರ್ಡ್ ಅಧ್ಯಕ್ಷ ವಿಜಯ್ ಸರ್ದೇಸಾಯಿ ಈ ಪ್ರಶ್ನಿಸಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ರವಿ ನಾಯ್ಕ್ ಗಟ್ಟಿ ನಿಲುವಿನ ಮಂತ್ರಿ. ಅವರು ಗೃಹ ಸಚಿವರಾಗಿದ್ದಾಗ ಹಲವು ದರೋಡೆಕೋರರ ವಿರುದ್ಧ ಕ್ರಮಕೈಗೊಂಡಿದ್ದರು. ಈ ಬಾರಿಯೂ ಅದೇ ಬಿರುಸು ತೋರಬೇಕು. ಈ ಪ್ರಕರಣದಲ್ಲಿ ಭಾಗಿಯಾಗಿರುವವರು ಯಾರು? ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ವಿಜಯ್ ಸರ್ದೇಸಾಯಿ ಪ್ರಶ್ನಿಸಿದ್ದಾರೆ.
ಕಳೆದ ಬಾರಿ ಗೋವಾದಲ್ಲಿ ಹಸಿರುಬೇಳೆ ಹಗರಣ ನಡೆದಾಗ ಧ್ವನಿ ಎತ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ್ದೆ. ಆದರೆ ಇದುವರೆಗೂ ಏನೂ ಆಗಲಿಲ್ಲ.ಇದೀಗ ಗೋವಾದಿಂದ ಪಡಿತರ ಅಕ್ಕಿಯನ್ನು ಕರ್ನಾಟಕಕ್ಕೆ ಕಳ್ಳಸಾಗಾಟ ಮಾಡಲಾಗುತ್ತಿರುವುದು ಬೆಳಕಿಗೆ ಬಂದಿದೆ. ಕರ್ನಾಟಕವು ಈಗಾಗಲೇ ಗೋವಾದ ಮಹದಾಯಿ ನದಿ ನೀರನ್ನು ತಿರುಗಿಸಿದೆ ಎಂದು ವಿಜಯ್ ಸರ್ದೇಸಾಯಿ ಠೀಕಾ ಪ್ರಹಾರ ನಡೆಸಿದ್ದಾರೆ.