Advertisement

ಡಿ.5ರಂದು ತುಳುಕೂಟದ ಹೊಸ ಅಕ್ಕಿ ಊಟ

11:12 AM Dec 03, 2021 | Team Udayavani |

ಬೆಂಗಳೂರು: ತುಳುಕೂಟ ಸಹಯೋಗ ದಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಶೈಲಿಯ ಹೊಸ ಅಕ್ಕಿ ಊಟ (ಪುದ್ದಾರ್‌ ವಣಸ್‌ ) ಕಾರ್ಯಕ್ರಮ ಡಿ.5 ರಂದು ನಡೆಯಲಿದೆ.

Advertisement

ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾನುವಾರ ಬೆಳಗ್ಗೆ 9.30ಕ್ಕೆ ವೆಸ್ಟ್‌ ಆಫ್ ಕಾರ್ಡ್‌ ರೋಡ್‌ ಡಾ. ಭೀಮಾರಾವ್‌ ಪ್ಯಾಲೇಸ್‌ನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಬೆಂಗಳೂರು ತುಳುಕೂಟದ ಅಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ ತಿಳಿಸಿದರು.

ಇದನ್ನೂ ಓದಿ:-ಪರಿಷತ್ ಚುನಾವಣೆಯಲ್ಲಿ ಮತದಾರರಿಗೆ ಲಕ್ಷ ಲಕ್ಷ ರೂ ನೀಡಲಾಗುತ್ತಿದೆ: ಹೆಚ್.ವಿಶ್ವನಾಥ್ ಆರೋಪ

ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಅಬಕಾರಿ ಸಚಿವ ಗೋಪಾಲಯ್ಯ, ಶಾಸಕರಾದ ಉಮಾನಾಥ ಕೋಟ್ಯಾನ್‌, ಹರೀಶ್‌ ಪೂಂಜ, ಶಾಸಕ ಕೆ. ರಘುಪತಿ ಭಟ್‌, ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next