Advertisement

ಅನ್ನ ನಿಸರ್ಗದ ವಿಶಿಷ್ಟ ಸೃಷ್ಟಿ: ಜೋಶಿ

01:22 PM Jul 15, 2019 | Suhan S |

ಧಾರವಾಡ: ಭತ್ತದ ಗದ್ದೆ ವಾಣಿಜ್ಯಗೊಂಡ ಪರಿಣಾಮ ಭತ್ತಕ್ಕೆ ಬೆಲೆ ಇಲ್ಲದಂತಾಗಿದ್ದು, ಭತ್ತಕ್ಕೆ ಬೆಲೆ ಹೋದರೆ ಮನುಷ್ಯನ ಜೀವನಕ್ಕೆ ಬೆಲೆ ಇಲ್ಲ ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ ಧರ್ಮದರ್ಶಿ ಭೀಮೇಶ್ವರ ಜೋಶಿ ಹೇಳಿದರು.

Advertisement

ಇಲ್ಲಿಯ ಕೆಲಗೇರಿಯ ಶಿರಡಿ ಸಾಯಿಬಾಬಾ ಸಂಸ್ಥೆ ಗುರುಪೂರ್ಣಿಮೆ ನಿಮಿತ್ತ ಸಾಯಿಬಾಬಾ ದೇವಸ್ಥಾನದಲ್ಲಿ ಮೂರು ದಿನಗಳ ಹಮ್ಮಿಕೊಂಡ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ಹಾಗೂ ಅತಿ ಎತ್ತರದ 21 ಅಡಿ ಅನ್ನಬ್ರಹ್ಮ ಮೂರ್ತಿ ಅನಾವರಣಗೊಳಿಸಿ ಅವರು ಮಾತನಾಡಿದರು.

ಅನ್ನ ನಿಸರ್ಗದ ವಿಶಿಷ್ಟ ಸೃಷ್ಟಿ. ರೈತಾಪಿ ಜನರ ಭತ್ತದ ಗದ್ದೆ ಹೆಚ್ಚಿದ್ದಷ್ಟು ನೀರಿನ ಮಹತ್ವ ಹೆಚ್ಚುತ್ತದೆ. ಬರಡು ಭೂಮಿ ಸಹ ಕೃಷಿ ಭೂಮಿ ಆಗುತ್ತದೆ. ಹೀಗಾಗಿ ಅನ್ನ ಪ್ರಧಾನವಾಗಬೇಕಾದರೆ ಅದಕ್ಕೆ ಬೆಲೆ ಬರಬೇಕು. ಈ ನಿಟ್ಟಿನಲ್ಲೆ ಬೆಲೆ ಪಡೆಯಲು ವ್ಯವಸ್ಥೆ ರೂಪಿಸಬೇಕಿದೆ ಎಂದರು.

ಅನ್ನ ಬ್ರಹ್ಮ ಶಬ್ದವೇ ವಿಶಿಷ್ಟ. ಇದು ಬ್ರಹ್ಮ-ವಿಷ್ಣು-ಮಹೇಶ್ವರ ಸಂಕೇತವಾಗಿದ್ದು, ಆ ಮೂರು ನಮ್ಮೊಳಗೆ ಇವೆ. ಸೃಷ್ಟಿ-ಸ್ಥಿತಿ-ಲಯ ಮೂರು ನಮ್ಮಲ್ಲಿದ್ದು, ನಮ್ಮ ಬೆಳವಣಿಗೆ ಚಿಂತನೆ ಮಾಡಿಸಲು ಹಚ್ಚುತ್ತಾನೆ. ನಾವು ಯಾವ ರೀತಿ ಜೀವನ ಸಾಗಬೇಕೆಂದು ನಿರ್ಧರಿಸಲು ಹಚ್ಚುತ್ತಾನೆ. ನಿತ್ಯ ಜೀವನದಲ್ಲಿ ಈ ಮೂರು ಇದ್ದರೆ ಜೀವನ ಗತಿ ಸಾಗುತ್ತದೆ. ಅನಂತ ಸ್ವರೂಪದ ಅನ್ನದಾನ, ವಿದ್ಯಾದಾನ, ದಾಹ ಬೆಳೆಸಿಕೊಂಡರೆ ಶಕ್ತಿ ಯುಕ್ತಿ ಜ್ಞಾನ ವಿಕಾಸ ಆಗಿ ಪರಮಾತ್ಮನ ಸಮೀಪ ಕೊಂಡೊಯ್ಯುತ್ತದೆ. ಆರ್ಥಿಕ ಸಂಪತ್ತು, ಜನ ಬಲ, ಅಧಿಕಾರ ಇದ್ದರೆ ಸಾಲದು. ಮನುಷ್ಯನ ಜೀವನ ಉಜ್ವಲ, ತೃಪ್ತಿ, ಸಂಭ್ರಮ ಕಾಣಬೇಕಾದರೆ ದೈವ ಸಂಪತ್ತು ಬೇಕು ಎಂದರು.

ನಮ್ಮ ಮಕ್ಕಳ ಭವಿಷ್ಯ ನಮ್ಮ ಕೈಯಲ್ಲಿರಬೇಕು. ಅದನ್ನು ನಾವು ಅದನ್ನು ಬೇರೆಯವರ ಕೈಗೆ ಕೊಡಬೇಡಿ ಎಂದ ಅವರು, ಮಕ್ಕಳನ್ನು ದೇವರ ಸಾನಿಧ್ಯಕ್ಕೆ ವಾರಕ್ಕೊಮ್ಮೆ ಕರೆದುಕೊಂಡು ಹೋಗಿ ಧಾರ್ಮಿಕ ಮಹತ್ವ ತಿಳಿಸಿ. ಸುಸಂಸೃ್ಕತ ಸಂಸಾರವೇ ಸದೃಢ-ಆರೋಗ್ಯವಂತ ಸಮಾಜದ ಲಕ್ಷಣ. ಆ ವಾತಾವರಣ ನಿರ್ಮಿಸಲು ಪ್ರಯತ್ನಿಸೋಣ ಎಂದರು.

Advertisement

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್‌. ಎಚ್. ಕೋನರಡ್ಡಿ ಮಾತನಾಡಿ, ಸಾಯಿಬಾಬಾ ಮಂದಿರ ಜಂಜಾಟದ ಪರಿಹಾರ ಮಾಡುವ ಪವಿತ್ರ ತಾಣ. ಇವು ನಮ್ಮ ಮನಸ್ಸಿಗೆ ನೆಮ್ಮದಿ ಕೇಂದ್ರಗಳು. ಸಾಯಿಬಾಬಾರವರ ಶಕ್ತಿ ಅಪಾರವಾದುದು ಒಳ್ಳೆಯ ಕೆಲಸಕ್ಕೆ ಸಾಯಿಬಾಬಾ ಆಶೀರ್ವಾದ ಬೇಕು ಎಂದರು. ಸಾಯಿಬಾಬಾ ಸಂಸ್ಥೆ ಅಧ್ಯಕ್ಷ ಮಹೇಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ದಾನಿಗಳಾದ ಸುಮಿತ್ರಾ ಹಾಗೂ ಡಾ|ಶಂಕರಗೌಡ ಪಾಟೀಲ, ಶಾಂತಾದೇವಿ ಪಾಟೀಲ, ಮಂದಾಕಿನಿ ಮತ್ತು ಮಧುಕರ್‌ ಮಹೇಂದ್ರಕರ, ಪ್ರಶಾಂತಿ ಮತ್ತು ಬಿ.ಟಿ. ರೆಡ್ಡಿ, ಚಂದನಾ ಮತ್ತು ಆನಂದ ಕಾಲವಾಡ, ಮಾಲತಿ ಅಣ್ವೇಕರ, ಲಲಿತಾದೇವಿ ಗುತ್ತಲ್ ಅವರನ್ನು ಗೌರವಿಸಲಾಯಿತು.

ಶಿರಡಿ ಸಾಯಿಬಾಬಾ ಸಂಸ್ಥೆಯ ಗುರುಪಾದಯ್ಯ ಹೊಂಗಲ್ ಮಠ,ಉದಯ ಶೆಟ್ಟಿ, ಕಿರಣ ಶಹಾ, ನಾರಾಯಣ ಕದಂ, ಟಿ.ಟಿ. ಚವ್ಹಾಣ, ಭಾಸ್ಕರ್‌ ರಾಯ್ಕರ್‌, ಸದಸ್ಯರಾದ ಸಂತೋಷ ಮಹಾಲೆ, ಅಮೃತ ನರೇಂದ್ರ, ಪ್ರದೀಪ ಕಕ್ಕಳ, ದಿನೇಶ ಅಡ್ಯಂತಾಯ, ಸಂತೋಷ ಮಿಕ್ಕಲಿ, ರಮೇಶ ನಾರಾಯಣಕರ, ಟಿ,ಟಿ. ಚವ್ಹಾಣ, ಸರೋಜನಿ ಕೊಟಬಾಗಿ, ಭಾಸ್ಕರ ರಾಯ್ಕರ, ಅಮೃತ ನರೇಂದ್ರ ಇತರರಿದ್ದರು. ರಾಜೇಶ್ವರಿ ಹಾಗೂ ಸಂಗಡಿಗರು ಪ್ರಾರ್ಥನೆ ನಡೆಸಿಕೊಟ್ಟರು. ಸುರೇಶ ಹಂಪಿಹೊಳಿ ನಿರೂಪಿಸಿ, ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next