Advertisement
ಮಾಸಿದ ಬಟ್ಟೆ
Related Articles
Advertisement
ಗಬ್ಬುನಾತದ ಮೈಯಿ
ಮಂಗಳಾರತಿಯ ಬಾಯಿ,
ನೀ ಯಾರೆಂದು ಕೇಳಿದೊಡನೆ
ನಾನು ಯಾರೆಂದು ಹೇಳಲಿ.
ನಾನು ಮುಸ್ಲಿಮನೋ !
ಹಿಂದೂ ಧರ್ಮದವನೋ
ಬೌದ್ಧನೋ ಕ್ರೈಸ್ತನೋ
ಯಾರೆಂದು ಹೇಳಲಿ
ಯಾರಿಗೆಂದು ಕೇಳಲಿ,
ನಾನು ಬಲ್ಲವನೇ
ನಿನ್ನೊಂದಿಗೆ ಬದುಕುವವನೇ .
ಮಾಸದೊಳಗಿನ ಹಸಿವು
ಹಾಲು ಜೇನು ಹಣ್ಣಿನಿಂದ
ಕೊಚ್ಚೆಯಲ್ಲಿ ಹರಿಯುವಾಗ
ಕಹಿಯಬಲ್ಲದ ಮರದ ಎಲೆಗೆ
ಬೆಲ್ಲದ ಸವಿಯನ್ನು ಎರೆದು ,
ಅನ್ನದ ಅಗುಳು ಬೆಂದಿದೆ ಹೊಟ್ಟೆ ಹೊಕ್ಕಲು.
ಸತ್ತ ಹೆಣದ ಮುಂದೆ
ಮುತ್ತಿಕ್ಕಿ ನಗುತ್ತಿರಲು
ಶಿವನ ತ್ರಿಶೂಲದಲ್ಲಿ
ಅಲ್ಲಾಹನ ಕಿಲುಬಿನಲ್ಲಿ
ಬುದ್ಧನ ಜ್ಞಾನ ಶಾಂತಿಯಲ್ಲಿ
ಕ್ರಿಸ್ತನ ಸೇವೆಯಲ್ಲಿ
ಕಣ್ಣೊಳಗೆ ಹಸಿದ ತುತ್ತು
ಸುಕ್ಕಿಟ್ಟ ಗೋಡೆಗೆ ತಾಕಿದೆ.
- ಭೋವಿ ರಾಮಚಂದ್ರ