Advertisement

ಕ್ರಾಂತಿಕಾರಿ ಬೆಳವಣಿಗೆ: ಉದ್ಯೋಗ ಭರ್ತಿ ಯೋಜನೆಗೆ ಬಿಜೆಪಿ ಬಣ್ಣನೆ

12:23 AM Jun 15, 2022 | Team Udayavani |

ಹೊಸದಿಲ್ಲಿ: ಸೇನಾ ಪಡೆಗಳಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡುವ ಅಗ್ನಿಪಥ ಮತ್ತು ಮುಂದಿನ ಒಂದೂವರೆ ವರ್ಷಗಳಲ್ಲಿ 10 ಲಕ್ಷ ಉದ್ಯೋಗ ನೀಡುವ ಸರಕಾರದ ಕ್ರಮವನ್ನು ಬಿಜೆಪಿ ಸ್ವಾಗತಿಸಿದೆ ಮತ್ತು ಕ್ರಾಂತಿಕಾರಕ ಬೆಳವಣಿಗೆ ಎಂದು ಬಣ್ಣಿಸಿದೆ.

Advertisement

ಯೋಜನೆಯನ್ನು ಹೊಗಳಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, “ಈ ಯೋಜನೆ ಯು ಭಾರತೀಯ ಯುವ ಸಮುದಾಯ ವನ್ನು ಶಿಸ್ತುಬದ್ಧ, ಕೌಶಲಯುತ, ಸದೃಢವಾಗಿ ಸುವುದರ ಜತೆ ಆರ್ಥಿಕವಾಗಿಯೂ ಸ್ವಾವ ಲಂಬಿಗಳಾಗಿಸುತ್ತದೆ. ಇದು ಆತ್ಮನಿರ್ಭರ ಭಾರತದ ನಿಜವಾದ ಅಡಿಪಾಯವಾಗಲಿದೆ. ಈ ಯೋಜನೆಯಿಂದಾಗಿ ಯುವಕರಿಗೆ ಉತ್ತಮ ಭವಿಷ್ಯದ ಬಾಗಿಲು ತೆರೆದು ಕೊಳ್ಳ ಲಿದೆ’ ಎಂದಿದ್ದಾರೆ. ಹಾಗೆಯೇ ಸರಕಾರಿ ಇಲಾಖೆ ಮತ್ತು ಸಚಿವಾಲಯಗಳಲ್ಲಿ ಮುಂದಿನ ಒಂದೂವರೆ ವರ್ಷದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಪ್ರಧಾನಿಯವರ ಆಶ್ವಾಸನೆಯನ್ನೂ ಶಾ ಕೊಂಡಾಡಿದ್ದಾರೆ.

“ಅಗ್ನಿಪಥ ಯೋಜನೆಯು ಯುವಕರನ್ನು ಶಿಸ್ತುಬದ್ಧರಾಗಿಸುವುದರ ಜತೆ ಅವರು ರಾಷ್ಟ್ರಕ್ಕೆ ಪರಿಣಾಮಕಾರಿಯಾಗಿ ಸಹಾಯ ಮಾಡಲು ಸಹಕಾರಿಯಾಗಿದೆ. ನಮ್ಮ ಸರಕಾರವು ಉದ್ಯೋಗ ಸೃಷ್ಟಿ ಒತ್ತು ನೀಡುತ್ತಿರುವುದು ಹಾಗೂ ಕೆಲಸದ ಹೊರೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವುದನ್ನು ಈ ಯೋಜನೆಯು ತೋರಿಸುತ್ತದೆ’ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ತಿಳಿಸಿದ್ದಾರೆ.

ಹೆಚ್ಚಲಿದೆ ಸೇನಾ ಸಾಮರ್ಥ್ಯ
“ಅಗ್ನಿಪಥ ಯೋಜನೆಯಿಂದಾಗಿ ದೇಶದ ಸಶಸ್ತ್ರ ಪಡೆಯು ತಾಂತ್ರಿಕ ಪರಿಣತಿ ಪಡೆದಿರುವ ಯುವಕರನ್ನು ಸೇರಿಸಿ ಕೊಳ್ಳಲಿದ್ದು, ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿ ಕೊಳ್ಳಲಿದೆ. ಪಡೆಗಳಲ್ಲಿ ಸೇವೆ ಸಲ್ಲಿಸಿ, ಶಿಸ್ತು, ಸಂಯಮ ಮತ್ತು ಕೌಶಲಯುತವಾಗುವ ಯುವಕರು ಸಮಾಜಕ್ಕೆ ವಾಪಸಾದಾಗ ಅವರು ದೇಶದ ಆಸ್ತಿಯಾಗದ್ದಾರೆ’ ಎಂದು ರಕ್ಷಣ ಸಚಿವ ರಾಜನಾಥ ಸಿಂಗ್‌ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಬಿಜೆಪಿ ವಕ್ತಾರ ಗೌರವ್‌ ಭಾಟಿಯಾ ಕೂಡ ಯೋಜನೆಯನ್ನು ಹೊಗಳಿ ಟ್ವೀಟ್‌ ಮಾಡಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next