ಬೆಂಗಳೂರು: ರಾಜಕೀಯ ಅತಂತ್ರದ ನಡುವೆಯೂ ರಾಜ್ಯ ಪೊಲೀಸರ ಬಹುದಿನಗಳ ಬೇಡಿಕೆಯಾದ ವೇತನ ಪರಿಷ್ಕರಣೆ ಸಂಬಂಧ ಔರಾದ್ಕರ್ ವರದಿ ಜಾರಿ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಈ ವೇತನ ಪರಿಷ್ಕರಣೆ ಆಗಸ್ಟ್ 1ರಿಂದಲೇ ಜಾರಿಯಾಗಲಿದೆ. ಇದರಿಂದ ಸರಕಾರಕ್ಕೆ 650 ಕೋಟಿ ರೂ. ವಾರ್ಷಿಕ ಹೊರೆಯಾಗಲಿದೆ.
ಸರಕಾರದ ತೀರ್ಮಾನದಿಂದ ಪೊಲೀ ಸರ ವೇತನ ಹೆಚ್ಚಳ ಹಾಗೂ ಕೆಲವು ಹೆಚ್ಚುವರಿ ಸೌಲಭ್ಯಗಳು ದೊರೆಯಲಿವೆ. ನಿವೃತ್ತಿಯಾಗಿರುವ ಪೊಲೀಸರಿಗೂ ಹೆಚ್ಚುವರಿ ಸೌಲಭ್ಯ ನೀಡಲಾಗಿದೆ.
ಔರಾದ್ಕರ್ ವರದಿಯಲ್ಲಿ ಶೇ. 35ರಷ್ಟು ವೇತನ ಹೆಚ್ಚಳಕ್ಕೆ ಶಿಫಾರಸು ಮಾಡಲಾಗಿತ್ತು. ಈಗ ಸರಕಾರ ವಿವಿಧ ಹಂತಗಳಲ್ಲಿ ವೇತನ ಪರಿಷ್ಕರಿಸಿ ಆದೇಶ ಹೊರಡಿಸಿದೆ.
ಸದ್ಯದಲ್ಲೇ ಪೊಲೀಸರಿಗೆ ಸಿಹಿ ಸುದ್ದಿ ಸಿಗಲಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದರು. ಅದರಂತೆ ಔರಾದ್ಕರ್ ವರದಿಯ ಶಿಫಾರಸು ಜಾರಿಗೊಳಿಸುವ ಸಂಬಂಧ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿವರ ಜತೆ ಚರ್ಚಿಸಿ ಮಂಗಳವಾರ ಅಂತಿಮಗೊಳಿಸಿದರು. ಅನಂತರ ಅಧಿಕೃತ ಆದೇಶ ಹೊರಡಿಸಲಾಯಿತು.
ವೇತನ ಹೆಚ್ಚಳ ವಿವರ
ಪೊಲೀಸ್ ಕಾನ್‌ಸ್ಟೆಬಲ್‌ಗಳಿಗೆ (ಮೀಸಲು ಸೇರಿ )
23,500 47,650 ರೂ.
ಮುಖ್ಯ ಪೊಲೀಸ್ ಕಾನ್‌ಸ್ಟೆಬಲ್‌ಗಳಿಗೆ
27,650 52,650 ರೂ.
ಸಹಾಯಕ ಸಬ್ ಇನ್ಸ್‌ಪೆಕ್ಟರ್‌ಗಳಿಗೆ
30,350 58,250 ರೂ.
ಇನ್ಸ್‌ಪೆಕ್ಟರ್‌ಗಳಿಗೆ
43,100 83,900 ರೂ.
ಎಸ್‌ಪಿ (ನಾನ್ ಐಪಿಎಸ್)
70,850 1,07100 ರೂ.