Advertisement

ಸಿಬಿಐ ತನಿಖೆ ಆದೇಶ ಪರಿಷ್ಕರಿಸಿ: ಪಾಟೀಲ್‌

11:39 PM Aug 21, 2019 | Lakshmi GovindaRaj |

ಬೆಂಗಳೂರು: ಪತ್ರಕರ್ತರು, ಸಾಮಾನ್ಯ ಜನರ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡಿದ್ದರೂ, ಅವರ ಖಾಸಗಿತನಕ್ಕೆ ಧಕ್ಕೆಯಾಗಿರುತ್ತದೆ. ಇವುಗಳನ್ನೂ ಫೋನ್‌ ಕದ್ದಾಲಿಕೆ ಪ್ರಕರಣದ ತನಿಖೆ ವ್ಯಾಪ್ತಿಗೆ ಒಳಪಡಿಸಲು ಅನುಕೂಲವಾಗುವಂತೆ ಸಿಬಿಐ ತನಿಖೆಗೆ ಹೊರಡಿಸಿರುವ ಆದೇಶವನ್ನು ಪರಿಷ್ಕರಿಸಬೇಕು ಎಂದು ಮಾಜಿ ಸಚಿವ ಎಚ್‌.ಕೆ.ಪಾಟೀಲ್‌ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

Advertisement

ಫೋನ್‌ ಕದ್ದಾಲಿಕೆ ಪ್ರಕರಣದಲ್ಲಿ ರಾಜಕಾರಣಿಗಳು, ಅವರ ಆಪ್ತರು ಹಾಗೂ ಅಧಿಕಾರಿಗಳ ದೂರವಾಣಿ ಕದ್ದಾಲಿಕೆಯನ್ನು ಮಾತ್ರ ಸಿಬಿಐ ತನಿಖೆ ಮಾಡಿದರೆ ಅಪೂರ್ಣವಾದಂತಾ ಗುತ್ತದೆ. ಅಧಿಕಾರಿಗಳು ಹಾಗೂ ಆಸಕ್ತರು ದುಡ್ಡಿನ ವ್ಯವಹಾರಗಳಲ್ಲಿ ಹಲವಾರು ಮಹತ್ವದ ವಿಷಯ ತಿಳಿಯಲು ಕಂಪನಿ ವ್ಯವಹಾರಸ್ಥರ, ಸಾಮಾನ್ಯರ ಫೋನ್‌ ಕದ್ದಾಲಿಕೆ ಮಾಡುವ ಸಾಧ್ಯತೆಗಳಿವೆ.

ಆದ್ದರಿಂದ ಪ್ರಕರಣವನ್ನು ಕೇವಲ ರಾಜಕಾರಣಿಗಳು ಹಾಗೂ ಅವರ ಸಂಬಂಧಿಗಳು ಮತ್ತು ಅಧಿಕಾರಿಗಳಿಗೆ ಮಾತ್ರ ಸೀಮಿತ ಗೊಳಿಸದೇ ಸಾಮಾನ್ಯರ ಫೋನ್‌ ಕದ್ದಾಲಿಸಿದ್ದರೂ, ಅದನ್ನೂ ಸಿಬಿಐ ತನಿಖೆ ವ್ಯಾಪ್ತಿಗೆ ಒಳಪಡಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಕೇವಲ ರಾಜಕೀಯ ಉದ್ದೇಶದಿಂದ ಸೀಮಿತ ತನಿಖೆ ನಡೆಸದೇ ವಿಸ್ತೃತ ತನಿಖೆ ನಡೆಸಲು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಪರಿಷ್ಕರಿಸುವಂತೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next