Advertisement

ಮತ ಹಾಕದಿದ್ದರೆ ಸರಕಾರ ದೂಷಿಸುವ ಹಕ್ಕಿಲ್ಲ

03:45 AM Feb 06, 2017 | Harsha Rao |

ಹೊಸದಿಲ್ಲಿ: “ನೀವು ಮತದಾನ ಮಾಡಿಲ್ಲವೇ? ಹಾಗಿದ್ದರೆ ಸರಕಾರಗಳನ್ನು ದೂಷಿಸುವ ಅಥವಾ ಪ್ರಶ್ನಿಸುವ ಅಧಿಕಾರವೇ ಇಲ್ಲ’ ಹೀಗೆಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ. ದೇಶಾದ್ಯಂತ ಇರುವ ಒತ್ತುವರಿಯನ್ನು ತೆರವುಗೊಳಿಸಲು ಆದೇಶ ನೀಡಬೇಕೆಂದು ದಿಲ್ಲಿ ಮೂಲದ ಎನ್‌ಜಿಒ ಅರ್ಜಿ ಸಲ್ಲಿಸಿತ್ತು. ಈ ಸಂದರ್ಭದಲ್ಲಿ ಹಾಜರಿದ್ದ ಎನ್‌ಜಿಒದ ಧನೇಶ್‌ ಈಶಧನ್‌ ಅವರಿಗೆ ಸೂಚ್ಯವಾಗಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ಅವರನ್ನೊಳಗೊಂಡ ಪೀಠ ತಿಳಿಯಪಡಿಸಿತು. ದೇಶಾದ್ಯಂತ ಇರುವ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸುವ ಬಗ್ಗೆ ರಾಜ್ಯ ಸರಕಾರಗಳಿಗೆ ಆದೇಶ ನೀಡಬೇಕು ಎನ್ನುವುದು ಧನೇಶ್‌ ಈಶಧನ್‌ರ ಅರ್ಜಿಯ ಅರಿಕೆಯಾಗಿತ್ತು. ಎಲ್ಲ ರಾಜ್ಯ ಸರಕಾರಗಳಿಗೆ ಅನುಗುಣವಾಗಿ ಆದೇಶಿಸಲು ಸಾಧ್ಯವಿಲ್ಲ. ಕೆಲವೊಂದು ವಿಚಾರಗಳು ರಾಜ್ಯ ಸರಕಾರಗಳ ವ್ಯಾಪ್ತಿಗೆ ಒಳಪಟ್ಟಿರುತ್ತವೆ.

Advertisement

ಹೀಗಾಗಿ ವಿವಿಧ ಹೈಕೋರ್ಟ್‌ಧಿಗಳಿಗೇ ಮನವಿ ಮಾಡಿಕೊಳ್ಳಿ ಎಂದು ನ್ಯಾಯಪೀಠ ಹೇಳಿತು. ಎಲ್ಲದಕ್ಕೂ ಸರಕಾರಗಳನ್ನೇ ಹೊಣೆ ಮಾಡಲು ಸಾಧ್ಯವಿಲ್ಲ ಎಂದ ನ್ಯಾಯಪೀಠ ಈಶಧನ್‌ ಅವರು ಮತ ಚಲಾಯಿಸಿದ್ದಾರೆಯೇ ಎಂದು ಪ್ರಶ್ನಿಸಿತು. ಈ ಸಂದರ್ಭದಲ್ಲಿ ಅವರು ಒಂದೇ ಒಂದು ಬಾರಿ ತಾವು ಮತಹಾಕಲಿಲ್ಲ ಎಂದು ಒಪ್ಪಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next