ಬೆಂಗಳೂರು: ಉರಿಗೌಡ ,ನಂಜೇಗೌಡ ರಾಜಕೀಯ ವಿಚಾರ ಆಗಬಾರದು. ಜಾತಿಗೆ ಯಾರು ಕೂಡ ಬಳಕೆ ಆಗಬಾರದು. ನಿರ್ಮಲನಂದನಾಥ ಶ್ರೀಗಳು ಸಿನಿಮಾ ಮಾಡಬಾರದು ಎಂದು ಸೂಚನೆ ನೀಡಿದ್ದಾರೆ ಇಲ್ಲಿಗೆ ಇದಕ್ಕೆ ಇತೀಶ್ರಿ ಹೇಳಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಈ ಬಗ್ಗೆ ಮಾತನಾಡಿದ ಅವರು, ಮುನಿರತ್ನ ಅವರ ಜತೆಗೂ ನಾನು ಮಾತನಾಡುತ್ತೇನೆ. ಶ್ರೀಗಳು ಕೂಡ ಮಾತನಾಡಿದ್ದಾರೆ. ಸಿನಿಮಾ ಮಾಡಬಾರದೆಂದು ಎಂದು ಶ್ರೀಗಳು ತಿಳಿಸಿದ್ದಾರೆ. ಉರಿಗೌಡ, ನಂಜೇಗೌಡ ಇಲ್ಲ ಎಂಬುವುದನ್ನು ವಿರೋಧ ಪಕ್ಷಗಳು ಸಾಬೀತು ಪಡಿಸಲಿ. ನಾವು ಅವು ಕಾಲ್ಪನಿಕ ಪಾತ್ರ ಅಲ್ಲ ಎಂಬುವುದನ್ನು ಸಾಬೀತು ಪಡಿಸುತ್ತೇವೆ ಎಂದರು.
ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಈ ಪರಿಸ್ಥಿತಿ ಬರಬಾರದಿತ್ತು: ಬಿ.ವೈ.ವಿಜಯೇಂದ್ರ
ಒಕ್ಕಲಿಗ ಸಮುದಾಯವದರು ಎಲ್ಲ ಪಕ್ಷದಲ್ಲಿ ಕೂಡ ದೊಡ್ಡ ದೊಡ್ಡ ಲೀಡರ್ ಇದ್ದಾರೆ. ಯಾವುದೇ ಒಂದು ಪಕ್ಷಕ್ಕೆ ಒಕ್ಕಲಿಗರು ಸೀಮಿತರಾಗಿಲ್ಲ. ಯಾರಗೂ ಪಾಳಗಾರಿಕೆಗೆ ಕೊಟ್ಟಿಲ್ಲಎಂದು ಪರೋಕ್ಷವಾಗಿ ಎಚ್ ಡಿಕೆ ವಿರುದ್ದ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದರು.