Advertisement
ಕಳೆದ ಗುರುವಾರ(ಫೆ.25)ದಂದು ಅವರು ಅಧಿಕೃತವಾಗಿ ಮಲಪುರಂ ನಲ್ಲಿ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
Related Articles
Advertisement
ಶ್ರೀದರನ್ ತಮ್ಮ ಕೆಲಸಕ್ಕಾಗಿ ಇಡೀ ಭಾರತದಲ್ಲಿಯೇ ಖ್ಯಾತಿ ಗಳಿಸಿದವರು. ರಾಜಕೀಯ ಪ್ರಮುಖ ನಾಯಕರಿಂದಲೂ ಕೂಡ ಗೌರವವನ್ನು ಅವರು ಪಡೆದಿದ್ದಾರೆ.
ಓದಿ : ರೈತ ವಿರೋಧಿ ಕಾಯ್ದೆ ಖಂಡಿಸಿ ಮಾ. 5ರಿಂದ ಬಸವ ಕಲ್ಯಾಣದಿಂದ ಬಳ್ಳಾರಿ ಪಾದಯಾತ್ರೆ
ದೆಹಲಿ ಮೆಟ್ರೋ ರೈಲ್ ಕಾರ್ಪೋರೇಷನ್ ನಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾಗ ಸಾರಿಗೆ ವ್ಯವಸ್ಥೆಯಲ್ಲಿ ಅವರ ನಾಯಕತ್ವದಲ್ಲಿ ತಂದ ಅಪಾರವಾದ ಬದಲಾವಣೆಗೆ ಅವರು ಭಾರತದಲ್ಲಿ ಖ್ಯಾತಿಗಳಿಸಿದ್ದಾರೆ. ಕೊಂಕಣ ರೈಲ್ವೆ ಹಾಗೂ ಮೆಟ್ರೋ ರೈಲುಗಳನ್ನು ಅನುಷ್ಠಾನಕ್ಕೆ ತರುವುದರ ಮೂಲಕ ಭಾರತೀಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮುಖವನ್ನೇ ಬದಲಾಯಿಸಿದ ಕೀರ್ತಿ ಶ್ರೀಧರನ್ ಅವರಿಗೆ ಸಲ್ಲುತ್ತದೆ. ತದನಂತರದ ದಿನಗಳಲ್ಲಿ ಅನೇಕ ಮೆಟ್ರೋ ನಗರಗಳಲ್ಲಿ ಮೆಟ್ರೋ ರೈಲು ಯೋಜನೆಗಳನ್ನು ಅನುಷ್ಟಾನಗೊಳಿಸಿದರು.
ಕೇರಳ ವಿಧಾನ ಸಭಾ ಚುನಾವಣೆಗೆ ಕೆಲವು ವಾರಗಳು ಇರುವ ಮುನ್ನ ಮಾಜಿ ದೆಹಲಿ ಮೆಟ್ರೋ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀಧರನ್ ಫೆ. 18 ರಂದು ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಘೋಷಿಸಿದ್ದರು. ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಚುನಾವಣಾ ಪ್ರಚಾರ ಸಭೆ “ವಿಜಯ ಯಾತ್ರಾ”ದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
“ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ನಾನು ಮುಖ್ಯಮಂತ್ರಿಯಾಗಲು ಸಿದ್ಧನಿದ್ದೇನೆ. ಪಕ್ಷ ಇದುವರೆಗೆ ನನ್ನನ್ನು ಆ ಬಗ್ಗೆ ಕೇಳಿಲ್ಲ. ಕೇಳುವುದಕ್ಕೆ ಇದು ಸೂಕ್ತವಾದ ಕಾಲವೂ ಅಲ್ಲ. ಆದರೇ, ಪಕ್ಷ ನನ್ನನ್ನು ಕೇಳಿದರೆ, ನಾನು ಮುಖ್ಯಮಂತ್ರಿಯಾಗಲು ಸಿದ್ಧನಿದ್ದೇನೆ. ಒಂದು ರಾಜ್ಯದ ಅಧಿಕಾರ ಹೇಗೆ ನಡೆಸಬೇಕು ಎನ್ನುವುದನ್ನು ತೋರಿಸಿಕೊಡುತ್ತೇನೆ” ಎಂದು ಶ್ರೀಧರನ್ ಎಎನ್ಐ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.
ಕೇರಳದ ವಿಧಾನ ಸಭಾ ಚುನಾವಣೆ ಬರುವ ಎಪ್ರಿಲ್ 6 ರಂದು ನಡೆಯಲಿದೆ. ಮತ ಎಣಿಕೆಯು ಮೇ 2 ರಂದು ನಡೆಯಲಿಕ್ಕಿದೆ.
ಭಾರತೀಯ ಚುನಾವಣಾ ಆಯೋಗ ಇತ್ತೀಚೆಗಷ್ಟೇ ವಿಧಾನ ಸಭಾ ಚುನಾವಣೆಯನ್ನು ಎದುರಿಸುತ್ತಿರುವ ನಾಲ್ಕು ರಾಜ್ಯಗಳಾದ ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶ ಪುದುಚೆರಿಗೆ ಚುನಾವಣಾ ದಿನಾಂಕವನ್ನು ನಿಗದಿ ಮಾಡಿದೆ.
ಓದಿ : ಕೋವಿಡ್ 19-ಲಸಿಕೆ ಪಡೆದ ನಂತರ ಪ್ರಧಾನಿ ಮೋದಿ… ಸಿಸ್ಟರ್ ನಿವೇದಾಗೆ ಹೇಳಿದ್ದೇನು?