ಬಂಟ್ವಾಳ : ಮಕ್ಕಳು ಭಗವಂತನ ಕೊಡುಗೆ. ಶಿಕ್ಷೆಯಿಂದ ಅವರ ಆತ್ಮಾಭಿಮಾನ ಕುಗ್ಗುತ್ತದೆ. ಅದಕ್ಕಾಗಿ ಹೆತ್ತವರು ನಮ್ಮ ಮಕ್ಕಳ ಒಳ್ಳೆಯ ಗುಣಗಳನ್ನು ಎತ್ತಿತೋರಿಸಿ ಹುರಿದುಂಬಿಸಬೇಕು ಎಂದು ಶಿಕ್ಷಣ ಶಿಕ್ಷಕ ವಿದ್ಯಾಲಯದ ಉಪನ್ಯಾಸಕ ಅಶೋಕ್ ಕಾಮತ್ ಅಭಿಪ್ರಾಯಪಟ್ಟರು.ಅವರು ಬಬ್ಬುಕಟ್ಟೆ ಹೀರಾ ವಿದ್ಯಾ ಸಂಸ್ಥೆಯಲ್ಲಿ ಬುಧವಾರ ನಡೆದ ಅಭಿನಂದನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಂತಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಅಬ್ದುಲ್ ರೆಹಮಾನ್ ವಹಿಸಿದ್ದರು.ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಬಿಹಾ ಫಾತಿಮಾ ಅವರು ಮಾತನಾಡಿ ಹೆತ್ತವರಾದ ನಾವು ಮಕ್ಕಳಿಗೆ ನಿಷ್ಕಲ್ಮಷ ಪ್ರೀತಿ, ಮಾನಸಿಕ ನೆಮ್ಮದಿ, ಜವಾಬ್ದಾರಿಯ ಅರಿವು ನೀಡಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಮನ್ಸೂರ್, ಶಾಹೀನಾ, ಶಾಂತಿ ಎಜುಕೇಶನಲ್ ಸ್ಥಾಪಕಾಧ್ಯಕ್ಷ ಕೆ. ಎಂ. ಶರೀಫ್, ಉಪಾಧ್ಯಕ್ಷ ಎ. ಎಚ್. ಮಹಮ್ಮದ್, ಟ್ರಸ್ಟಿಗಳಾದ ಅಬ್ದುಲ್ ಖಾದರ್, ಅಬ್ದುಲ್ ಕರೀಂ, ಇಲ್ಯಾಸ್ ಇಸ್ಮಾಯಿಲ್, ಉಮಾರ್ ಬಾವಾ, ಅಬ್ಟಾಸ್ ಪಿ., ಸಾಜಿದಾ ಮುಮಿನ್, ಸಮೀರಾ, ನಾಸಿರಾ ದೀನ್, ಸಮೀರ್ ಹಾಗೂ ಹೀರಾ ವಿದ್ಯಾ ಸಂಸ್ಥೆಗಳ ಮುಖ್ಯಸ್ಥರು ಹಾಗೂ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು.
ಈ ಸಂದರ್ಭ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಹೀರಾ ವಿದ್ಯಾ ಸಂಸ್ಥೆಯ ಸಂಚಾಲಕ ರಹಮ್ಮತುಲ್ಲಾ ಸ್ವಾಗತಿಸಿದರು. ಶಿಕ್ಷಕಿ ಮೇಘಾ ಕಾರ್ಯಕ್ರಮ ನಿರ್ವಹಿಸಿ, ಉಪನ್ಯಾಸಕಿ ಭಾಗೀರಥಿ ವಂದಿಸಿದರು.