Advertisement
ರೇವತಿ ಹೇಳುತ್ತಲೇ ಹೋದರು. ಈಗ 76 ವರ್ಷದ ಇಳಿ ವಯಸ್ಸಿನ ಅಜ್ಜಿ ಕೆ. ಆರಮ್ಮಾಳ್ ತೋರಿದ ಪ್ರೀತಿ, ಆತ್ಮೀಯತೆ, ಎಲ್ಲರಿಗೂ ಮಾದರಿಯಾಗುವಂತೆ ಬೆಳೆಸಿದ ರೀತಿಯನ್ನು ಬಾಯ್ತುಂಬ ಹೊಗಳಿದರು. ಅವರು ವಿದ್ಯಾಭ್ಯಾಸಕ್ಕಾಗಿ ತಮ್ಮನ್ನು ಶಾಲೆ, ಕಾಲೇಜಿಗೆ ಸೇರಿಸದೇ ಹೋಗಿದ್ದರೆ, ಅಲ್ಲಿ ತನ್ನ ಓಟದ ಪ್ರತಿಭೆ ಬೆಳಕಿಗೆ ಬಾರದೇ ಇದ್ದಿದ್ದರೆ, ಕೆ. ಕಣ್ಣನ್ ಅವರಂಥ ಕೋಚ್ ಲಭಿಸದೇ ಹೋಗಿದ್ದರೆ ತನಗಿಂದು ಟೋಕಿಯೊ ಭಾಗ್ಯ ಖಂಡಿತ ಲಭಿಸುತ್ತಿರಲಿಲ್ಲ ಎಂದು ಹೃದಯದಿಂದ ನುಡಿಯುತ್ತಿದ್ದರು ರೇವತಿ…ಹೌದು, ತಮಿಳುನಾಡಿನ ಮಧುರೈ ಜಿಲ್ಲೆಯ ಸಕ್ಕಿಮಂಗಲಂ ಎಂಬ ಸಣ್ಣ ಗ್ರಾಮದ 23 ವರ್ಷದ ರೇವತಿ ಟೋಕಿಯೊ ಒಲಿಂಪಿಕ್ಸ್‌ನ 4×400 ಮೀ. ಮಿಶ್ರ ಡಬಲ್ಸ್ ಸ್ಪರ್ಧೆಗಾಗಿ ಆಯ್ಕೆಯಾದ ಪ್ರತಿಭೆ!
“ನಮ್ಮ ಸಂಬಂಧಿಕರು, ಊರಿನವ ರೆಲ್ಲ ಅಜ್ಜಿಯೊಂದಿಗೆ ನಮ್ಮನ್ನೂ ಇಟ್ಟಿಗೆ ಗೂಡಿಗೆ ಕೆಲಸಕ್ಕೆ ಕಳುಹಿಸಿ ಎಂದು ಹೇಳಿದ್ದರು. ಆದರೆ ಅಜ್ಜಿ ಇದಕ್ಕೆ ಒಪ್ಪಲಿಲ್ಲ. ಇಬ್ಬರಿಗೂ ಉತ್ತಮ ವಿದ್ಯಾಭ್ಯಾಸ ನೀಡುವುದೇ ಅವರ ಮುಖ್ಯ ಗುರಿಯಾಗಿತ್ತು. ಅವರ ಕನಸು ದೊಡ್ಡ ಮಟ್ಟದಲ್ಲೇ ನನಸಾಗಿದೆ’ ಎಂದರು ರೇವತಿ.
Related Articles
ತಮಿಳುನಾಡು ನ್ಪೋರ್ಟಿಂಗ್ ಡೆವಲಪ್‌ಮೆಂಟ್ ಅಥಾರಿಟಿಯ ಕೆ. ಕಣ್ಣನ್ ಅವರು ರೇವತಿಯ ಓಟದ ಸಾಮರ್ಥ್ಯವನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಿದರು. ಮಧುರೈ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಲೂ ನೆರವಾದರು. ಪಟಿಯಾಲಾ ನ್ಯಾಶನಲ್ ಕ್ಯಾಂಪ್ ಸೇರಿದ ಬಳಿಕ ರೇವತಿಯ ಅದೃಷ್ಟ ಖುಲಾಯಿಸಿತು.
Advertisement
ಫೆಡರೇಶನ್ ಕಪ್, ಇಂಡಿಯನ್ ಗ್ರ್ಯಾನ್‌ಪ್ರಿ 5-6 ವಿಭಾಗಗಳಲ್ಲಿ ಪದಕಗಳನ್ನೂ ಗೆದ್ದರು. ಟೋಕಿಯೊ ಒಲಿಂಪಿಕ್ಸ್ ಆಯ್ಕೆ ಟ್ರಯಲ್‌ನಲ್ಲಿ 53.5 5 ಸೆಕೆಂಡ್ಸ್ ಸಾಧನೆಯೊಂದಿಗೆ ಗುರಿ ಮುಟ್ಟಿದರು.