Advertisement

ರೇವಣ್ಣಯ್ಯ ಕಡೂರು ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ

12:06 PM Jul 27, 2020 | mahesh |

ಕಡೂರು: ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ಕಡೂರು ಶಾಖೆಯ ನೂತನ ಅಧ್ಯಕ್ಷರಾಗಿ ಎಚ್‌.ಎಂ. ರೇವಣ್ಣಯ್ಯ, ಉಪಾಧ್ಯಕ್ಷರಾಗಿ ತಿಮ್ಮೇಗೌಡ ಅವಿರೋಧವಾಗಿ ಆಯ್ಕೆಯಾದರು. ಪಟ್ಟಣದ ಹಳೆಪೇಟೆಯಲ್ಲಿರುವ ಬ್ಯಾಂಕ್‌ನ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಹಾಜರಿದ್ದ ಎಲ್ಲಾ ಸದಸ್ಯರು ಸರ್ವಾನುಮತದಿಂದ ಅಧ್ಯಕ್ಷ, ಉಪಾಧ್ಯಕ್ಷರನ್ನು ಅವಿರೋಧ ಆಯ್ಕೆ ಮಾಡಿದರು ಎಂದು ಚುನಾವಣಾಧಿಕಾರಿ ಹರೀಶ್‌ಕುಮಾರ್‌ ಜಿ.ಎಚ್‌. ಮಾಹಿತಿ ನೀಡಿದರು. ಬ್ಯಾಂಕ್‌ನ 14 ಜನ ಸದಸ್ಯರು ಸಹ ಹಾಜರಿದ್ದು ಅಧ್ಯಕ್ಷರ ಸ್ಥಾನಕ್ಕೆ ಎಚ್‌.ಎಂ. ರೇವಣ್ಣಯ್ಯ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ತಿಮ್ಮೇಗೌಡ ಮಾತ್ರ ನಾಮಪತ್ರ ಸಲ್ಲಿಸಿದ್ದ ಕಾರಣ ಇವರ ಆಯ್ಕೆಯನ್ನು ಅವಿರೋಧ ಎಂದು ಘೋಷಿಸಲಾಯಿತು ಎಂದರು.

Advertisement

ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕೆ.ಎಚ್‌. ರಂಗನಾಥ್‌ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಭಿನಂದಿಸಿ ಮಾತನಾಡಿದರು. ಮಾಜಿ ಅಧ್ಯಕ್ಷ ಎಸ್‌. ವಿರೂಪಾಕ್ಷಪ್ಪ, ಎಂ.ಎನ್‌. ನಟರಾಜು ನೂತನ ಅಧ್ಯಕ್ಷರಿಗೆ ಅಭಿನಂದಿಸಿ ಮಾತನಾಡಿದರು. ನಿರ್ದೇಶಕರಾದ ಪುಷ್ಪಲತಾ ಸೋಮೇಶ್‌, ರೇಣುಕಮ್ಮ, ಸಿ.ಎಂ. ಕಲ್ಲೇಶಪ್ಪ, ಕೆ.ಎನ್‌. ಯೋಗಿಶಪ್ಪ, ಸಿ.ವಿ. ಯತೀಶ್‌, ಓಂಕಾರಪ್ಪ, ಮೋಹನ್‌ನಾಯ್ಕ, ಟಿ. ಶಂಕರಪ್ಪ, ಆರ್‌. ಶ್ರೀನಿವಾಸಮೂರ್ತಿ ಮತ್ತು ನಾಮ ನಿರ್ದೇಶಕ ಎಸ್‌. ಈ ಪರಮೇಶ್ವರಪ್ಪ ಇದ್ದರು. ಎಪಿಎಂಸಿ ಅಧ್ಯಕ್ಷ ಲಕ್ಕಣ್ಣ, ಮಾಜಿ ಅಧ್ಯಕ್ಷ ಶಿವಕುಮಾರ್‌, ಚಿಕ್ಕದೇವನೂರು ರವಿ, ಲಕ್ಷ್ಮಣನಾಯ್ಕ, ಎಪಿಎಂಸಿ ಮಾಜಿ ನಿರ್ದೇಶಕ ಮಂಡಿ ಸತೀಶ್‌, ಟಿ.ಆರ್‌. ಲಕ್ಕಪ್ಪ, ಕೆ.ಬಿ. ಸೋಮೇಶ್‌, ಕೆ.ಜಿ. ಲೋಕೇಶ್‌, ಶಿವಬೋರ್‌ವೆಲ್‌ ಪ್ರೇಮಕುಮಾರ್‌ ಹಾಗೂ ಬಿಜೆಪಿಯ ಮುಖಂಡರು, ಗ್ರಾಮೀಣ ಭಾಗಗಳಿಂದ ಬಂದಿದ್ದ ನೂರಾರು ರೈತರು ಇದ್ದರು. ಬ್ಯಾಂಕಿನ ವ್ಯವಸ್ಥಾಪಕ ಕೆ.ವಿ.ನಾಗೇಶ್‌,ಲೆಕ್ಕಾ  ಧಿಕಾರಿ ಶಿವಾಜಿ ಲಮಾಣಿ ಹಾಗು ಸಿಬ್ಬಂದಿ ವರ್ಗದವರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next