Advertisement

ಪ್ರಥಮ ಸೆಮಿಸ್ಟರ್‌ ಮರು ಮೌಲ್ಯಮಾಪನ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಕೆ

12:49 AM Feb 01, 2023 | Team Udayavani |

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಎಪ್ರಿಲ್‌/ಮೇಯಲ್ಲಿ ನಡೆಸಿದ ಪ್ರಥಮ ಸೆಮಿಸ್ಟರ್‌ ಪದವಿ ಪರೀಕ್ಷೆ ಉತ್ತರ ಪತ್ರಿಕೆಯ ವೈಯಕ್ತಿಕ ವೀಕ್ಷಣೆ/ಮರು ಎಣಿಕೆ/ ಉತ್ತರ ಪತ್ರಿಕೆಯ ನಕಲು ಪ್ರತಿಗೆ/ಮರು ಮೌಲ್ಯಮಾಪನಕ್ಕೆ ಯುಯುಸಿಎಂಎಸ್‌ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ದಿನಾಂಕ ಪ್ರಕಟಿಸಿದೆ.

Advertisement

ಉತ್ತರ ಪತ್ರಿಕೆಯ ವೈಯಕ್ತಿಯ ವೀಕ್ಷಣೆ, ಮರು ಎಣಿಕೆ, ನಕಲು ಪಡೆಯಲು, ಮರು ಮೌಲ್ಯ ಮಾಪನಕ್ಕೆ ಫೆ. 10ರ ಒಳಗೆ ಅರ್ಜಿ ಸಲ್ಲಿಸಬೇಕು.

ಪ್ರಾಂಶುಪಾಲರು ಪೋರ್ಟಲ್‌ನಲ್ಲಿ ಫೆ. 13ರ ಒಳಗೆ ಅನುಮೋದನೆ ಮಾಡಬೇಕು. ಅರ್ಜಿ ಸಲ್ಲಿಸಿದವರ ವಿವರ ಮತ್ತು ಶುಲ್ಕ ಪಾವತಿ ವಿವರಗಳ ಪಟ್ಟಿಯನ್ನು ಫೆ. 17ರ ಒಳಗೆ ವಿ.ವಿ. ಕಚೇರಿಗೆ ಸಲ್ಲಿಸಬೇಕು. ಶುಲ್ಕವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಯುಯುಸಿಎಂಎಸ್‌ ಪೋರ್ಟಲ್‌ ಮೂಲಕ ಪಾವತಿಸಬೇಕು. ವಿದ್ಯಾ ರ್ಥಿಗಳು ಉತ್ತರ ಪತ್ರಿಕೆಯ ವೈಯಕ್ತಿಕ ವೀಕ್ಷಣೆ, ಮರು ಎಣಿಕೆ ಹಾಗೂ ನಕಲು ಪ್ರತಿ ಪಡೆಯಲು ಗುರುತಿನ ಚೀಟಿಯೊಂದಿಗೆ ವಿ.ವಿ.ಗೆ ಫೆ. 20, 21 ಯಾ 22ರಂದು ಬರಬೇಕು ಎಂದು ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next