Advertisement

ಸಿನಿಮೀಯ ರೀತಿ ಯೆಮೆನ್‌ನಿಂದ ವಾಪಸಾದ ಬೆಸ್ತರು

10:01 AM Dec 02, 2019 | Team Udayavani |

ಕೊಚ್ಚಿ: ಸಾವಿರಾರು ಕಿ.ಮೀ. ದೂರದಲ್ಲಿ ಯಾರಾದರೂ ಸಿಕ್ಕಿಹಾಕಿ ಕೊಂಡಿದ್ದರೆ ಹಡಗು, ವಿಮಾನ ಇಲ್ಲವೇ ಯಾವುದಾದರೂ ವಾಹನದಲ್ಲಿ ಅಚ್ಚರಿಯ ರೀತಿ ತಪ್ಪಿಸಿಕೊಂಡು ಬರುವುದನ್ನು ಸಿನೆಮಾದಲ್ಲಿ ಉಸಿರು ಬಿಗಿ ಹಿಡಿದುಕೊಂಡು ನೋಡಿರುತ್ತೀರಿ. ಆದೇ ರೀತಿ “ಬಂಧಿ’ ಆಗಿದ್ದ ಭಾರತದ ಒಂಭತ್ತು ಬೆಸ್ತರು 3 ಸಾವಿರ ಕಿ.ಮೀ. ದೂರದ ಯೆಮೆನ್‌ನಿಂದ ಹಡಗೊಂದನ್ನು ಕದ್ದು ಅದರಲ್ಲಿ ಸುದೀರ್ಘ‌ 10 ದಿನಗಳ ಕಾಲ ಸಮುದ್ರ ಮಾರ್ಗವಾಗಿ ಸಂಚರಿಸಿ ಆಶ್ವರ್ಯ ಕರ ರೀತಿಯಲ್ಲಿ ತಪ್ಪಿಸಿಕೊಂಡು ಬಂದಿದ್ದಾರೆ.

Advertisement

ಕಳೆದ ಡಿಸೆಂಬರ್‌ನಲ್ಲಿ ಕೇರಳದ ಇಬ್ಬರು ಹಾಗೂ ತಮಿಳುನಾಡಿದ ಏಳು ಮೀನು ಗಾರರು ಉದ್ಯೋಗ ಅರಸಿಕೊಂಡು ಯೆಮೆನ್‌ಗೆ ತೆರಳಿದ್ದರು. ಆದರೆ, ಮಾಲಕನೊಬ್ಬ ಇವರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡು ಮೀನುಗಾರಿಕೆ ಕೆಲಸ ಮಾಡಿಸಿಕೊಳ್ಳ ತೊಡಗಿದ್ದ. ವೇತನ ಮಾತ್ರ ವಲ್ಲ, ಊಟವನ್ನೂ ಕೊಡುತ್ತಿರಲಿಲ್ಲ. ಇದ ರಿಂದ ರೋಸಿ ಹೋಗಿದ್ದ ಅವರು, ಒಂದು ದಿನ ಮಾಲಕನ ಮೀನುಗಾರಿಕಾ ದೋಣಿ ಯನ್ನೇ ಕದ್ದು, ಸ್ವದೇಶಕ್ಕೆ ಮರಳುವ ಸಾಹಸಕ್ಕೆ ಮುಂದಾದರು. ಅದರಂತೆ 3 ಸಾವಿರ ಕಿ.ಮೀ. ದೂರದ ಯೆಮೆನ್‌ನಿಂದ 10 ದಿನಗಳ ಸಮುದ್ರಯಾನ ನಡೆಸಿ ಕೊನೆಗೂ ಕೊಚ್ಚಿ ಬಂದರು ತಲುಪಿದ್ದಾರೆ. ತವರಿಗೆ ಬಂದಿಳಿ ಯುತ್ತಿದ್ದಂತೆ ನಿಟ್ಟುಸಿರು ಬಿಟ್ಟ ಈ 9 ಮಂದಿ ಇಲ್ಲಿನ ಮಣ್ಣಿಗೆ ಮುತ್ತಿಟ್ಟು ನಮಸ್ಕಾರ ಮಾಡಿದರು. ಈ ಕುರಿತು ಪ್ರತಿಕ್ರಿಯಿಸಿರುವ ಅಧಿಕಾರಿಗಳು, ವಲಸೆ ನಿಯಮ ಪ್ರಕ್ರಿಯೆ ಗಳನ್ನು ಪೂರ್ಣಗೊಳಿಸಿ ಅವರ ಕುಟುಂಬ ಗಳನ್ನು ಸೇರಿಕೊಳ್ಳಲು ಅವಕಾಶ ಕಲ್ಪಿಸಲಾ ಗುವುದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next