Advertisement

24 ವರ್ಷದಿಂದ ಕಚೇರಿಗೆ ನಿವೃತ್ತ ಶಿಕ್ಷಕನ ಅಲೆದಾಟ!

11:51 AM Feb 01, 2023 | Team Udayavani |

ಮಾಗಡಿ: ಮುಖ್ಯ ಶಿಕ್ಷಕರಾಗಿದ್ದ ಎಚ್‌.ಸಿದ್ದಲಿಂಗಪ್ಪ ಅವರು ನಿವೃತ್ತಿಯಾಗಿ 24 ವರ್ಷ ಕಳೆದರೂ ಇನ್ನೂ ಸಹ ಅವರಿಗೆ ಸೇರಬೇಕಾದ ಸೇವಾ ಅವಧಿಯ ಹಣಬಂದಿಲ್ಲ. ಜತೆಗೆ ಅವರಿಗೆ ಸಿಗಬೇಕಾಗಿದ್ದ ಮುಂಬಡ್ತಿ ವೇತನವೂ ಸಿಕ್ಕಿಲ್ಲ, ಇದಕ್ಕಾಗಿ 24 ವರ್ಷದಿಂದ ಬಿಇಒಕಚೇರಿಗೆ ಅಲೆದು ಅಲೆದು 24 ಜತೆ ಚಪ್ಪಲಿಸವೆಸಿದರೂ ಸೌಲಭ್ಯದ ನ್ಯಾಯ ಸಿಕ್ಕಿಲ್ಲ ಎಂದು ಅವರ ಪುತ್ರ ಮಹೇಶ್ವರಯ್ಯ ಅವರು ಬಿಇಒ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿದರು.

Advertisement

ನಿರ್ಲಕ್ಷ್ಯ ಧೋರಣೆ: ತಾಲೂಕಿನ ಕಣನೂರು ಗ್ರಾಮದ ನಿವೃತ್ತ ಮುಖ್ಯ ಶಿಕ್ಷಕ ಎಚ್‌.ಸಿದ್ದಲಿಂ ಗಪ್ಪ32 ವರ್ಷ ಸೇವೆ ಸಲ್ಲಿಸಿ, ಜೌಡೇಬೇಗೂರಿ ನಲ್ಲಿಯೇ1999ರಲ್ಲಿ ನಿವೃತ್ತಿಯಾಗಿದ್ದಾರೆ. 1992ರ ಜೂನ್‌ನವೇತನ ಬಂದಿಲ್ಲ, 1993ರಿಂದ 1999ರ ವರೆಗೂ ಹೈದರಾಬಾದ್‌ ವೇತನದ ಬಾಕಿ, ವಾರ್ಷಿಕ ಬಡ್ತಿ , 1974ರ ಕನ್ನಡ ಭಾಷೆಗೆ ಸಂಬಂಧಿಸಿದ ಮುಂಬಡ್ತಿನೀಡಿಲ್ಲ. ಗಳಿಕೆ ರಜಾದ ವೇತನವಾಗಲಿ, ಸ್ಟಾಗ್ನಷೇನ ಇಂಕ್ರೀಮೆಂಟ್‌ ನೀಡಿಲ್ಲ. 1960-1967 ರವರೆಗೆ ಸಿದ್ಧ ಗಂಗಾ ಪ್ರಾಕ್ಟಿಸಿಂಗ್‌ ಎಲಿಮೆಂಟರಿ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದು, ಸದರಿ ವೇತನ ಪರಿಗಣಿಸಿಲ್ಲ, ಬಿಇಒ ಅವರನ್ನು ಪ್ರಶ್ನಿಸಿದರೆ ಸೇವಾನಿರತ (ಎಸ್‌.ಆರ್‌) ಪುಸ್ತಕ ವೇ ಕಳೆದುಹೋ ಗಿದೆ. ಈ ಸಂಬಂಧ ಕೇಸ್‌ ವರ್ಕರ್‌ಗೆ ನೋಟಿಸ್‌ ನೀಡಿಡಿದ್ದೇವೆ ಎನ್ನುತ್ತಿದ್ದು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಶಿಕ್ಷಣ ಇಲಾಖೆ ವಿರುದ್ಧ ಮಹೇಶ್ವರಯ್ಯ ಆಕ್ರೋಶ ವ್ಯಕ್ತಪಡಿಸಿದರು.

ನಾನು 1 ತಿಂಗಳಿನಿಂದ ಕಚೇರಿಗೆ ಅಲೆಯುತ್ತಿದ್ದೇನೆ. ನಮ್ಮ ತಂದೆಗೆ ಈಗ 86 ವರ್ಷ ವಯಸ್ಸು. ನಾನು ದುಡಿದ ಹಣ ನನಗೆ ಬರಲಿಲ್ಲವಲ್ಲ ಎಂದು ನೊಂದಿದ್ದಾರೆ. ತನ್ನ ತಂದೆ ಸಾವಿಗೆ ಶಿಕ್ಷಣ ಇಲಾಖೆಯೇ ನೇರ ಹೊಣೆ ಆಗಬೇಕಾಗುತ್ತದೆ ಎಂದು ಶಿಕ್ಷಣ ಇಲಾಖೆಗೆ ದೂರು ಪತ್ರ ಬರೆಯಲಾಗಿದೆ. – ಮಹೇಶ್ವರಯ್ಯ, ಸಿದ್ದಲಿಂಗಪ್ಪ(ನಿವೃತ್ತ ಶಿಕ್ಷಕರು) ಪುತ್ರ

ನಿವೃತ್ತ ಮುಖ್ಯ ಶಿಕ್ಷಕ ಎಚ್‌.ಸಿದ್ದಲಿಂಗಯ್ಯ ಅವರ ಸೇವಾ ಅವಧಿ ದಾಖಲೆ ಪುಸ್ತಕಗಳು ಸಿಗುತ್ತಿಲ್ಲ. ಇಲಾಖೆಯ ಈಹಿಂದಿನ ಸಿಬ್ಬಂದಿ ಖಾನ್‌ ಅವರು ಏಕೆ ಸೌಲಭ್ಯಕೊಟ್ಟಿಲ್ಲ ಎಂಬುದರ ಬಗ್ಗೆ ಗೊತ್ತಿಲ್ಲ ಎಂದು ಪ್ರಶ್ನಿಸಿ ನೋಟಿಸ್‌ ಜಾರಿ ಮಾಡಲಾಗಿದೆ. ಬೇಕಿದ್ದರೆ ಅವರಿಗೆ ಹಿಂಬರಹ ಕೊಡಲಿದ್ದೇವೆ. -ನಾಗೇಶ್‌ಕುಮಾರ್‌, ವ್ಯವಸ್ಥಾಪಕರು ಬಿಇಒ ಕಚೇರಿ ಮಾಗಡಿ

-ಟಿ.ಎಂ.ಶ್ರೀನಿವಾಸ್‌

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next