ಕೊಪ್ಪಳ: ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮದ ಸೀಮೆಯಲ್ಲಿ ಸುಜ್ಲಾನ್ ವಿಂಡ್ ಮಿಲ್ ಪ್ರೈವೇಟ್ ಲಿ. ಎಂಬ ಖಾಸಗಿ ಗಾಳಿ ವಿದ್ಯುತ್ ಕಂಪನಿವೊಂದರಲ್ಲಿ ಕೆಲಸ ನಿರ್ವವಹಿಸುತ್ತಿದ್ದ ನಿವೃತ್ತ ಸೈನಿಕ ಮೊಹಮ್ಮದ್ ರಫಿ(52) ಎಂಬುವವರ ಮೇಲೆ ವ್ಯಕ್ತಿ ಒರ್ವ ಹಲ್ಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ..!
ಸುಜ್ಲಾನ್ ವಿಂಡ್ ಮಿಲ್ ಪ್ರೈವೇಟ್ ಲಿ. ಕಂಪನಿಯಲ್ಲಿ ಸೆಕ್ಯೂರಿಟಿ ಸೂಪರ್ ವೈಸರ್ ಆಗಿ ಕೆಲಸ ನಿರ್ವವಹಿಸುತ್ತಿದ್ದ ಮಹಮ್ಮದ್ ರಫಿ ಅವರು ಹಾಗೂ ಸಿಬಂದಿಗಳು ನವೆಂಬರ್ 24 ರಂದು ವಿದ್ಯುತ್ ಉತ್ಪಾದನಾ ಯಂತ್ರದ ಬಳಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ದೋಟಿಹಾಳ ಗ್ರಾಮದ ಮೈನುದ್ದೀನ್ ಸಾಬ್ ಹಿರೇಮನಿ ಎಂಬ ವ್ಯಕ್ತಿ ತಿಂಗಳ ಮಾಮೂಲು ನೀಡಿ ಕೆಲಸ ಮಾಡಬೇಕೆಂದು ಗಧರಿಸಿ, ಸೆಕ್ಯೂರಿಟಿ ಮಹಮ್ಮದ್ ರಫಿ ಅವರ ಮೇಲೆ ಬಿದಿರಿನ ಕೋಲಿನಿಂದ ಮನಬಂದಂತೆ ಹೊಡೆದಿದ್ದಾನೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಪ್ರಕರಣ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಹಲ್ಲೆ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಸಿಪಿಐ ಅವರು ಮಾಹಿತಿ ನೀಡಿದ್ದಾರೆ.