ಕಾರ್ಕಳ: ಕೆರೆಯ ನೀರಿನ ಮಟ್ಟ ನೋಡಲು ಹೋದ ನಿವೃತ್ತ ಮುಖ್ಯ ಶಿಕ್ಷಕರೋರ್ವರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಬಜಗೋಳಿ ಮುಡಾರು ಗ್ರಾಮದ ಕಲ್ಲಟ್ಟೆ ಎಂಬಲ್ಲಿ ನಡೆದಿದೆ.
ನರಸಿಂಹ ಭಟ್ (67) ಮೃತರು. ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಗುರುವಾರ ಮನೆಯ ಸಮೀಪದ ತೋಟದ ಕೆರೆಯ ನೀರಿನ ಮಟ್ಟ ನೋಡಲು ಹೋದವರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ವಿಷಯ ತಿಳಿದು ಮನೆಯವರು ಅವರನ್ನು ಕೆರೆಯಿಂದ ಮೇಲಕ್ಕೆತ್ತಿ ಚಿಕಿತ್ಸೆಗೆಂದು ಬಜಗೋಳಿಯ ಕ್ಲಿನಿಕ್‌ಗೆ ಕರೆತಂದಿದ್ದು ಪರೀಕ್ಷಿಸಿದ ವೈದ್ಯರು ಆಗಲೇ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಮುಖ್ಯ ಶಿಕ್ಷಕರ ನಿಧನಕ್ಕೆ ಮೂಡುಬಿದಿರೆ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಸ್ವಾಮೀಜಿಯವರು ಸಂತಾಪ ವ್ಯಕ್ತಪಡಿಸಿದ್ದಾರೆ.