Advertisement

ಮಾರ್ಚ್‌ಗೆ ಹಣದುಬ್ಬರ ಶೇ.5ಕ್ಕಿಂತ ಕೆಳಗೆ; ಎಸ್‌ಬಿಐ ಸಂಶೋಧನಾ ವರದಿ ಉಲ್ಲೇಖ

09:55 PM Jan 14, 2023 | Team Udayavani |

ನವದೆಹಲಿ/ಮುಂಬೈ:ಗ್ರಾಹಕ ಮಾರುಕಟ್ಟೆ ಆಧಾರಿತ ಹಣದುಬ್ಬರ ಪ್ರಮಾಣ ಮಾರ್ಚ್‌ಗೆ ಶೇ.5ಕ್ಕಿಂತಲೂ ಇಳಿಕೆಯಾಗುವ ಸಾಧ್ಯತೆ ಇದೆ. ಹೀಗೆಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಸಂಶೋಧನಾ ವಿಭಾಗದ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

Advertisement

ಕೇಂದ್ರ ಸರ್ಕಾರದ ಡಿಸೆಂಬರ್‌ನಲ್ಲಿ ಹಣದುಬ್ಬರ ಪ್ರಮಾಣ ಒಂದು ವರ್ಷದ ಕನಿಷ್ಠ ಅಂದರೆ ಶೇ.5.72ಕ್ಕೆ ಇಳಿಕೆಯಾಗಿದೆ ಎಂದು ದೃಢಪಡಿಸಿರುವಂತೆಯೇ ಎಸ್‌ಬಿಐನ ವರದಿಯಲ್ಲಿಯೂ ಆಶಾದಾಯಕ ಅಂಶ ವ್ಯಕ್ತವಾಗಿದೆ. ಜನವರಿಯಿಂದ ಮಾರ್ಚ್‌ ಅವಧಿಯಲ್ಲಿ ಚಿಲ್ಲರೆ ಮಾರಾಟ ಕ್ಷೇತ್ರದ ಹಣದುಬ್ಬರ ಪ್ರಮಾಣ ಶೇ.4.7ರ ಆಸುಪಾಸಿನಲ್ಲಿ ಇರಲಿದೆ ಎಂದು ಅದರಲ್ಲಿ ಅಭಿಪ್ರಾಯಪಡಲಾಗಿದೆ.

“ಗ್ರಾಹಕ ಆಧಾರಿತ ಹಣದುಬ್ಬರ 2022ರ ಡಿಸೆಂಬರ್‌ನಲ್ಲಿ ಒಂದು ವರ್ಷ ಕನಿಷ್ಠಕ್ಕೆ ಅಂದರೆ ಶೇ.5.72ಕ್ಕೆ ಇಳಿಕೆಯಾಗಿದೆ. ತರಕಾರಿಗಳ ಬೆಲೆಗಳಲ್ಲಿ ಇಳಿಕೆಯಾದ್ದರಿಂದ ಈ ಬೆಳವಣಿಗೆಯಾಗಿದೆ. ರೈತರು ವಿವಿಧ ಬೆಳೆಗಳ ಬಿತ್ತನೆ ವಿಚಾರಲ್ಲಿ ಅನುಸರಿಸಿದ ವಿಧಾನ, ಉತ್ತಮ ಹವಾಗುಣ ಕೂಡ ಹಣದುಬ್ಬರ ಇಳಿಕೆಗೆ ಕಾರಣ’ ಎಂದು ಎಸ್‌ಬಿಐನ ಆರ್ಥಿಕ ಸಲಹೆಗಾರ ಸೌಮ್ಯ ಕಾಂತಿ ಘೋಷ್‌ ಹೇಳಿದ್ದಾರೆ. ಹೀಗಾಗಿ, ಮಾರ್ಚ್‌ ವೇಳೆಗೆ ಮತ್ತಷ್ಟು ಹಣದುಬ³ರ ಇಳಿಕೆಯಾಗಲಿದೆ ಎಂದು ಪ್ರತಿಪಾದಿಸಿದ್ದಾರೆ.

ಬಡ್ಡಿದರ ಏರಿಕೆ ಖಚಿತ:
ಹಣದುಬ್ಬರ ಪ್ರಮಾಣ ಇಳಿಕೆಯಾದರೂ, ಮುಂದಿನ ತಿಂಗಳು ನಡೆಯಲಿರುವ ಆರ್‌ಬಿಐ ಮುಂದಿನ ವಿತ್ತೀಯ ನೀತಿ ಪರಾಮರ್ಶೆ ಸಮಿತಿ ಸಭೆಯಲ್ಲಿ ಬಡ್ಡಿ ದರ ಏರಿಕೆ ಮಾಡಲಾಗುತ್ತದೆ ಎಂದು ವಿಶ್ಲೇಷಣೆ ನಡೆಸಲಾಗಿದೆ. 2022 ಡಿ.7ರಂದು ಆರ್‌ಬಿಐ ಶೇ.0.35 (35 ಬೇಸಿಸ್‌ ಪಾಯಿಂಟ್ಸ್‌) ಬಡ್ಡಿ ದರ ಏರಿಕೆ ಮಾಡಲಾಗಿತ್ತು. 2022ರ ಮೇನಿಂದ ಬಡ್ಡಿ ದರ ಏರಿಕೆಯಾಗುತ್ತಾ ಬಂದಿದೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next